ನವದೆಹಲಿ: ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್ ದರ ಬುಧವಾರ ₹25 ಏರಿಕೆಯಾಗಿದೆ. ಇದರೊಂದಿಗೆ ಸತತ ಎರಡನೇ ತಿಂಗಳು ಎಲ್‌ಪಿಜಿ ದರ ಹೆಚ್ಚಾದಂತಾಗಿದೆ.
ಸಬ್ಸಿಡಿ ಸಹಿತ ಎಲ್‌ಪಿಜಿ ದರ ಈಗ ದೆಹಲಿಯಲ್ಲಿ 14.2 ಕೆ.ಜಿ ಸಿಲಿಂಡರ್‌ಗೆ ₹859 ಆಗಿದೆ ಎಂದು ತೈಲ ಕಂಪನಿಗಳ ಪ್ರಕಟಣೆ ತಿಳಿಸಿದೆ.
ಜುಲೈ 1ರಂದು ಎಲ್‌ಪಿಜಿ ಸಿಲಿಂಡರ್ ಬೆಲೆ ₹25.50 ಹೆಚ್ಚಳ ಮಾಡಲಾಗಿತ್ತು. ಸಂಸತ್ ಅಧಿವೇಶನ ನಡೆಯುತ್ತಿದ್ದ ಕಾರಣ ಪ್ರತಿಪಕ್ಷಗಳಿಂದ ವಿರೋಧ ಎದುರಾಗಬಹುದೆಂದು ಆಗಸ್ಟ್ 1ರಂದು ದರ ಏರಿಕೆ ಮಾಡಿರಲಿಲ್ಲ ಎಂದು ಕೈಗಾರಿಕಾ ಮೂಲಗಳು ಹೇಳಿವೆ.
ಜನವರಿ 1ರಿಂದ ಈವರೆಗೆ ಎಲ್‌ಪಿಜಿ ಸಿಲಿಂಡರ್ ದರ ಒಟ್ಟು ₹165 ಏರಿಕೆಯಾಗಿದೆ. ಸರ್ಕಾರವು ಪ್ರತಿ ತಿಂಗಳು ದರ ಏರಿಸುವ ಮೂಲಕ ಎಲ್‌ಪಿಜಿಯ ಮೇಲಿನ ಸಬ್ಸಿಡಿಗಳನ್ನು ತೆಗೆದುಹಾಕಿದೆ. ಕಳೆದ ಏಳು ವರ್ಷಗಳಲ್ಲಿ ಅಡುಗೆ ಅನಿಲ ದರ ದುಪ್ಪಟ್ಟಾಗಿದೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.