ADVERTISEMENT

ಕಾಗ್ನಿಜಂಟ್‌ ಪ್ರಕರಣದಲ್ಲಿ ಪಾತ್ರ ಇಲ್ಲ: ಎಲ್‌ಆ್ಯಂಡ್‌ಟಿ

ಪಿಟಿಐ
Published 20 ಫೆಬ್ರುವರಿ 2019, 20:01 IST
Last Updated 20 ಫೆಬ್ರುವರಿ 2019, 20:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ಅಮೆರಿಕದ ಪ್ರಮುಖ ಐ.ಟಿ ಕಂಪನಿ ಕಾಗ್ನಿಜಂಟ್, ಭಾರತದಲ್ಲಿ ಲಂಚ ಪಾವತಿಸಿದ ಪ್ರಕರಣದಲ್ಲಿ ತನ್ನ ಪಾತ್ರವಿಲ್ಲ ಎಂದುಪ್ರಮುಖ ಮೂಲಸೌಕರ್ಯ ಕಂಪನಿ ಲಾರ್ಸನ್‌ ಆ್ಯಂಡ್‌ ಟೂಬ್ರೊ (ಎಲ್‌ಆ್ಯಂಡ್‌ಟಿ) ಹೇಳಿದೆ.

ಆರೋಪ ಇತ್ಯರ್ಥಪಡಿಸಿಕೊಳ್ಳುವ ಕಾಗ್ನಿಜಂಟ್‌ ನಿರ್ಧಾರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಲಂಚ ನೀಡಿರುವುದರಲ್ಲಿ ತನ್ನ ಪಾತ್ರವಿರುವ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳೂ ಇಲ್ಲ. ಕಂಪನಿಯಾಗಲಿ, ಸಿಬ್ಬಂದಿಯಾಗಲಿ ಅಮೆರಿಕದಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆಯಲ್ಲಿ ಭಾಗಿಯಾಗಿಲ್ಲ ಎಂದು ಸಂಸ್ಥೆಯು ಮುಂಬೈ ಷೇರುಪೇಟೆಗೆ ಸ್ಪಷ್ಟನೆ ನೀಡಿದೆ.

ಕಾಗ್ನಿಜಂಟ್‌ ಬಹಳ ವರ್ಷಗಳಿಂದಲೂ ಎಲ್‌ಆ್ಯಂಡ್‌ಟಿಯ ಗ್ರಾಹಕರ ಕಂಪನಿಯಾಗಿದೆಯಷ್ಟೆ ಎಂದೂ ಮಾಹಿತಿ ನೀಡಿದೆ.

ADVERTISEMENT

2014ರಲ್ಲಿತಮಿಳುನಾಡಿನ ಸರ್ಕಾರಿ ಅಧಿಕಾರಿಯೊಬ್ಬರಿಗೆ ಲಂಚ ನೀಡುವಲ್ಲಿ ಪಾತ್ರವಹಿಸಿದ್ದಕಾಗ್ನಿಜಂಟ್‌ ಕಂಪನಿಯ ಇಬ್ಬರು ಮಾಜಿ ಅಧಿಕಾರಿಗಳ ವಿರುದ್ಧ ಅಮೆರಿಕದ ನ್ಯಾಯಾಂಗ ಇಲಾಖೆ, ಅಪರಾಧ ಪ್ರಕರಣ ದಾಖಲಿಸಿತ್ತು. ಕಂಪನಿಯು ವಿದೇಶಿ ಭ್ರಷ್ಟಾಚಾರ ಕಾಯ್ದೆ (ಎಫ್‌ಸಿಪಿಎ) ಉಲ್ಲಂಘಿಸಿದೆ ಎಂದು ಎಸ್‌ಇಸಿ ದೂರಿನಲ್ಲಿ ಉಲ್ಲೇಖಿಸಿತ್ತು.

ತಮಿಳನಾಡಿನ ಅಧಿಕಾರಿಯೊಬ್ಬರು, ಚೆನ್ನೈನಲ್ಲಿ ಕಾಗ್ನಿಜಂಟ್‌ ಕಂಪನಿಯ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲು ₹14.26 ಕೋಟಿ ಲಂಚದ ಬೇಡಿಕೆ ಇಟ್ಟಿದ್ದರು. ಇದಕ್ಕೆ ಕಂಪನಿ ಒಪ್ಪಿಕೊಂಡಿತ್ತು. ಇದು ಎಸ್‌ಇಸಿ ಗಮನಕ್ಕೆ ಬಂದು, ಭ್ರಷ್ಟಾಚಾರ ವಿರೋಧಿ ನಿಯಮ ಉಲ್ಲಂಘನೆಯಾಗಿದೆ ಎಂದು ಕಾಗ್ನಿಜಂಟ್‌ ವಿರುದ್ಧ ಪ್ರಕರಣ ದಾಖಲಿಸಿತ್ತು.

ಈ ಭ್ರಷ್ಟಾಚಾರ ಆರೋಪವನ್ನು ಇತ್ಯರ್ಥಪಡಿಸಿಕೊಳ್ಳಲು, ಅಮೆರಿಕ ರಕ್ಷಣೆ ಮತ್ತು ವಿನಿಮಯ ಆಯೋಗಕ್ಕೆ (ಎಸ್‌ಇಸಿ) ₹178 ಕೋಟಿ ದಂಡ ಪಾವತಿಸಲು ಕಾಗ್ನಿಜಂಟ್‌ ಒಪ್ಪಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.