
ಬೆಂಗಳೂರು: ನಗರದ ಮೈಸೂರು ರಸ್ತೆಯಲ್ಲಿನ ನಾಯಂಡಹಳ್ಳಿಯಲ್ಲಿರುವ ಗ್ಲೋಬಲ್ ಮಾಲ್ಸ್ ಡಿವಿನಿಟಿಯಲ್ಲಿ ಲುಲು ಗ್ರೂಪ್ ಇಂಡಿಯಾ ತನ್ನ ಐದನೇ ಲುಲು ಡೈಲಿ ಹೈಪರ್ ಮಾರ್ಕೆಟ್ ಅನ್ನು ಶನಿವಾರ ಉದ್ಘಾಟನೆ ಮಾಡಿದೆ.
ಮಳಿಗೆಯ ಉದ್ಘಾಟನೆಯಿಂದ ಸಾವಿರಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಉದ್ಘಾಟನೆ ವೇಳೆ ಲುಲು ಗ್ರೂಪ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಅಶ್ರಫ್ ಅಲಿ ಎಂ.ಎ, ನಿರ್ದೇಶಕರು ಮತ್ತು ಸಿಇಒ ನಿಶಾದ್ ಎಂ.ಎ, ಫಹಾಜ್ ಅಶ್ರಫ್, ಲುಲು ಇಂಟರ್‌ನ್ಯಾಷನಲ್ ಹೋಲ್ಡಿಂಗ್ಸ್‌ನ ನಿರ್ದೇಶಕ ಆನಂದ್ ಎ.ವಿ, ಮಾಧ್ಯಮ ವಿಭಾಗದ ಮುಖ್ಯಸ್ಥ ಸ್ವರಾಜ್ ಎನ್.ಬಿ, ಲುಲು ಕರ್ನಾಟಕ ಪ್ರಾದೇಶಿಕ ನಿರ್ದೇಶಕ ಶರೀಫ್ ಕೆ.ಕೆ, ಪ್ರಾದೇಶಿಕ ವ್ಯವಸ್ಥಾಪಕ ಜಮಾಲ್ ಕೆ.ಪಿ ಹಾಗೂ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.