ಬೆಂಗಳೂರು: ಮಹೀಂದ್ರ ಆ್ಯಂಡ್ ಮಹೀಂದ್ರ ಲಿಮಿಟೆಡ್‌ನ ಉತ್ಪನ್ನಗಳ ಅಧಿಕೃತ ತಯಾರಕರಾದ ಎಸ್ಕಾನ್ ಜೆನ್‌ಸೆಟ್ ಕಂಪನಿಯು, ಸಿಪಿಸಿಬಿ ಐವಿಪ್ಲಸ್ ಜೆನ್‌ಸೆಟ್‌ಗಳನ್ನು ಮಹೀಂದ್ರ ಪವರೋಲ್‌ನ ಪ್ರಧಾನ ವ್ಯವಸ್ಥಾಪಕ ಸುಮಿತ್ ಗುಪ್ತಾ, ಎಸ್ಕಾನ್ ಜೆನ್‌ಸೆಟ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ದಂಢಾನೀಯ ನಗರದಲ್ಲಿ ಬಿಡುಗಡೆಗೊಳಿಸಿದರು.
ದಾಬಸ್‌ಪೇಟೆಯಲ್ಲಿ ತಯಾರಿಸಿರುವ ಈ ಜೆನ್‌ಸೆಟ್‌ಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಕಾಮನ್ ರೇಲ್ ಡೀಸೆಲ್ ಎಂಜಿನ್ ಹೊಂದಿವೆ. ಇಂಧನ ಕ್ಷಮತೆ ಮತ್ತು ಹೆವಿ ಡ್ಯೂಟಿಗೆ ಸೂಕ್ತವಾಗಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಿಗದಿಪಡಿಸಿರುವ ಮಾನದಂಡಕ್ಕಿಂತಲೂ ಕಡಿಮೆ ಮಾಲಿನ್ಯ ಹೊರಸೂಸುತ್ತದೆ. ಜೆನ್‌ಸೆಟ್‌ಗಳಿಗೆ ಸಂಬಂಧಿಸಿದ ಯಾವುದೇ ವಿಚಾರಗಳು, ದೂರುಗಳಿಗೆ ಕೂಡಲೇ ಸ್ಪಂದಿಸಲು ಎಲ್ಲೆಡೆ ಗ್ರಾಹಕ ಸೇವಾ ಕೇಂದ್ರಗಳು ಇವೆ ಎಂದು ಕಂಪನಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.