ADVERTISEMENT

ಮಹೀಂದ್ರ ಲಾಜಿಸ್ಟಿಕ್ಸ್‌ ತೆಕ್ಕೆಗೆ ಮೆರು ಕ್ಯಾಬ್ಸ್

ಪಿಟಿಐ
Published 9 ನವೆಂಬರ್ 2021, 13:56 IST
Last Updated 9 ನವೆಂಬರ್ 2021, 13:56 IST

ನವದೆಹಲಿ: ಮೆರು ಕ್ಯಾಬ್ಸ್‌ಅನ್ನು ಸ್ವಾಧೀನಪಡಿಸಿಕೊಂಡಿರುವುದಾಗಿ ಮಹೀಂದ್ರ ಲಾಜಿಸ್ಟಿಕ್ಸ್‌ ಲಿಮಿಟೆಡ್‌ (ಎಂಎಲ್‌ಎಲ್‌) ಮಂಗಳವಾರ ಹೇಳಿದೆ. ಈ ಸ್ವಾಧೀನದಿಂದಾಗಿ ತನ್ನ ಎಂಟರ್‌ಪ್ರೈಸಸ್‌ ಮೊಬಿಲಿಟಿ ವಹಿವಾಟು ಇನ್ನಷ್ಟು ವಿಸ್ತರಣೆ ಆಗಲಿದೆ ಎಂದು ಅದು ತಿಳಿಸಿದೆ.

ಮೆರು ಟ್ರ್ಯಾವೆಲ್‌ ಸಲ್ಯೂಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ನ (ಎಂಟಿಎಸ್‌ಪಿಎಲ್) ಮೆರು ಮೊಬಿಲಿಟಿ ಟೆಕ್‌ ಪ್ರೈವೇಟ್‌ ಲಿಮಿಟೆಡ್‌, ವಿ–ಲಿಂಕ್‌ ಫ್ಲೀಟ್‌ ಸಲ್ಯೂಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ವಿ–ಲಿಂಕ್‌ ಆಟೊಮೊಟಿವ್‌ ಸರ್ವೀಸಸ್‌ ಪ್ರೈವೇಟ್‌ ಲಿಮಿಟೆಡ್‌ ಅನ್ನು ಪೂರ್ತಿಯಾಗಿ ಸ್ವಾಧೀನಕ್ಕೆ ಪಡೆದಿರುವುದಾಗಿ ಮಹೀಂದ್ರ ಲಾಜಿಸ್ಟಿಕ್ಸ್‌ ತಿಳಿಸಿದೆ.

2006ರಲ್ಲಿ ಆರಂಭ ಆದ ಮೆರು ಕ್ಯಾಬ್ಸ್‌, ಕೇವಲ ಒಂದು ಕರೆಗೆ ಮನೆ ಬಾಗಿಲಿಗೆ ಎ.ಸಿ. ಸೌಲಭ್ಯದ ಕ್ಯಾಬ್‌ ಸೇವೆ ಒದಗಿಸಲು ಶುರು ಮಾಡಿತು. ಸದ್ಯ, ಏರ್‌ಪೋರ್ಟ್‌ ಪ್ರಯಾಣ ಮತ್ತು ಕಾರ್ಪೊರೇಟ್‌ ವಲಯದಲ್ಲಿ ಮೆರು ಕ್ಯಾಬ್‌ ಸೇವೆ ಒದಗಿಸುತ್ತಿದೆ. ಕಂಪನಿಯು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯುತ್‌ ಚಾಲಿತ ವಾಹನಗಳನ್ನೂ ಹೊಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.