ADVERTISEMENT

ಮಲಬಾರ್ ಗೋಲ್ಡ್: ಕಮ್ಮನಹಳ್ಳಿ ಮಳಿಗೆಯಲ್ಲಿ ಆಭರಣ ಪ್ರದರ್ಶನ, ಮಾರಾಟ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2022, 16:34 IST
Last Updated 21 ಫೆಬ್ರುವರಿ 2022, 16:34 IST
ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಕಂಪನಿಯ ಕಮ್ಮನಹಳ್ಳಿ ಮಳಿಗೆಯಲ್ಲಿ ಆಭರಣ ಪ್ರದರ್ಶನ, ಮಾರಾಟ ಮೇಳಕ್ಕೆ ಫೆಬ್ರುವರಿ 19ರಂದು ಚಾಲನೆ ನೀಡಲಾಯಿತು.
ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಕಂಪನಿಯ ಕಮ್ಮನಹಳ್ಳಿ ಮಳಿಗೆಯಲ್ಲಿ ಆಭರಣ ಪ್ರದರ್ಶನ, ಮಾರಾಟ ಮೇಳಕ್ಕೆ ಫೆಬ್ರುವರಿ 19ರಂದು ಚಾಲನೆ ನೀಡಲಾಯಿತು.   

ಬೆಂಗಳೂರು: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಕಂಪನಿಯು ನಗರದ ಕಮ್ಮನಹಳ್ಳಿಯಲ್ಲಿ ಇರುವ ತನ್ನ ಮಳಿಗೆಯಲ್ಲಿ ಚಿನ್ನ, ವಜ್ರ ಹಾಗೂ ಅಮೂಲ್ಯ ಮುತ್ತುಗಳಿಂದ ಸಿದ್ಧಪಡಿಸಿದ ಕಲಾತ್ಮಕ ಆಭರಣಗಳ ‍ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಿದೆ. ಇದು ಫೆಬ್ರುವರಿ 27ರವರೆಗೆ ನಡೆಯಲಿದೆ.

ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ನ ಉಪ ಬ್ರ್ಯಾಂಡ್‌ಗಳಾಗಿರುವ ಮೈನ್, ಇರಾ, ಡಿವೈನ್, ಎತ್ನಿಕ್ಸ್, ಪ್ರೆಸಿಯಾ, ಸ್ಟಾರ್ಲೆಟ್ ಆಭರಣಗಳು ಈ ಮಾರಾಟ ಮೇಳದಲ್ಲಿ ಲಭ್ಯವಿರಲಿವೆ ಎಂದು ಪ್ರಕಟಣೆ ತಿಳಿಸಿದೆ.

‘ಕಲಾತ್ಮಕ ಆಭರಣಗಳ ಪ್ರದರ್ಶನವು ಕಲಾವಿದರ ಕೌಶಲ ಮತ್ತು ಅನುಭವವನ್ನು ತೋರಿಸುತ್ತದೆ. ಗ್ರಾಹಕರು ತಮ್ಮ ಪಾಲಿನ ಅಮೂಲ್ಯ ಸಂದರ್ಭಗಳನ್ನು ಆಚರಿಸಲು ಈ ಆಭರಣಗಳನ್ನು ಆಯ್ಕೆ ಮಾಡಿಕೊಳ್ಳಬಹುದು’ ಎಂದು ಕಂಪನಿಯ ಅಧ್ಯಕ್ಷ ಎಂ.ಪಿ. ಅಹಮದ್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.