ADVERTISEMENT

ಡೆಲಾಯ್ಟ್‌ ಪಟ್ಟಿ: ಮಲಬಾರ್‌, ಟೈಟಾನ್‌ಗೆ ಜಾಗತಿಕ ಬ್ರ್ಯಾಂಡ್‌ ಸ್ಥಾನ

ಕಲ್ಯಾಣ್‌, ಜೋಯ್ ಅಲುಕ್ಕಾಸ್‌ಗೂ ಮಾನ್ಯತೆ

ಪಿಟಿಐ
Published 19 ಫೆಬ್ರುವರಿ 2024, 15:46 IST
Last Updated 19 ಫೆಬ್ರುವರಿ 2024, 15:46 IST
<div class="paragraphs"><p>ಮಂಡ್ಯ ನಗರದ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಸಮೀಪವಿರುವ ಮಲಬಾರ್‌ ಗೋಲ್ಡ್‌ ಅಂಗಡಿ </p></div>

ಮಂಡ್ಯ ನಗರದ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಸಮೀಪವಿರುವ ಮಲಬಾರ್‌ ಗೋಲ್ಡ್‌ ಅಂಗಡಿ

   

ಮುಂಬೈ: ಆಭರಣ ತಯಾರಿಕಾ ಕಂಪನಿ ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ ಹಾಗೂ ಫ್ಯಾಷನ್‌ ಪರಿಕರಗಳನ್ನು ತಯಾರಿಸುವ ಟೈಟಾನ್‌ ಕಂಪನಿ ಸೇರಿದಂತೆ ಭಾರತದ ಪ್ರಮುಖ ನಾಲ್ಕು ಕಂಪನಿಗಳು, ಜಗತ್ತಿನ ನೂರು ಐಷಾರಾಮಿ ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ. 

ಡೆಲಾಯ್ಟ್‌ ಕಂಪನಿಯು ಸೋಮವಾರ ಬಿಡುಗಡೆಗೊಳಿಸಿರುವ ಗ್ಲೋಬಲ್‌ ಲಕ್ಸುರಿ ಗೂಡ್ಸ್‌ ಪಟ್ಟಿ 2023ರ ಪ್ರಕಾರ ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ 19ನೇ ಸ್ಥಾನ ಪಡೆದಿದೆ. ಕೇರಳದ ಕೋಯಿಕ್ಕೋಡ್‌ ಮೂಲದ ಈ ಕಂಪನಿಯು ಇದೇ ಮೊದಲ ಬಾರಿಗೆ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.  

ADVERTISEMENT

ಟಾಟಾ ಸಮೂಹದ ಟೈಟಾನ್‌ 24ನೇ ಸ್ಥಾನ, ಕಲ್ಯಾಣ್‌ ಜುವೆಲ್ಲರ್ಸ್‌ 46ನೇ ಸ್ಥಾನ ಹಾಗೂ ಜೋಯ್ ಅಲುಕ್ಕಾಸ್‌ 47ನೇ ಸ್ಥಾನ ಪಡೆದಿದೆ.

ಸೆಂಕೋ ಗೋಲ್ಡ್ ಆ್ಯಂಡ್‌ ಡೈಮಂಡ್ಸ್ ಮತ್ತು ತಂಗಮಯಿಲ್ ಜ್ಯುವೆಲ್ಲರಿ ಕ್ರಮವಾಗಿ 78 ಹಾಗೂ 98ನೇ ಸ್ಥಾನ ಪಡೆದಿವೆ. ಜಗತ್ತಿನ ಐಷಾರಾಮಿ ಉತ್ಪನ್ನಗಳ ತಯಾರಿಕಾ ಕಂಪನಿಯಾದ ಫ್ರೆಂಚ್‌ನ ಎಲ್‌ವಿಎಂಎಚ್‌ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. 

‘ದೇಶೀಯ ಬ್ರ್ಯಾಂಡ್‌ಗಳು, ಐಷಾರಾಮಿ ಉತ್ಪನ್ನಗಳ ಮಾರುಕಟ್ಟೆಯ ಪ್ರೇರಕ ಶಕ್ತಿಯಾಗಿವೆ. ದೇಶೀಯ ಆರ್ಥಿಕತೆಯ ಬೆಳವಣಿಗೆ ಹಾಗೂ ಗ್ರಾಹಕರ ಮೆಚ್ಚುಗೆಯಿಂದಾಗಿ ದೇಶೀಯ ಐಷಾರಾಯಿ ಉತ್ಪನ್ನಗಳ ಮಾರುಕಟ್ಟೆಯು ಅಭಿವೃದ್ಧಿ ಹೊಂದುತ್ತಿದೆ. ಜೊತೆಗೆ, ಜಾಗತಿಕ ಮಟ್ಟದಲ್ಲಿ ಈ ಬ್ರ್ಯಾಂಡ್‌ಗಳನ್ನು ಗುರುತಿಸುವಿಕೆಗೂ ಇದು ನೆರವಾಗಲಿದೆ’ ಎಂದು ಡೆಲಾಯ್ಟ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.