ADVERTISEMENT

ತಯಾರಿಕಾ ವಲಯದ ಬೆಳವಣಿಗೆ ಇಳಿಕೆ: ಸಮೀಕ್ಷೆ ವರದಿ

ಪಿಟಿಐ
Published 2 ಜನವರಿ 2026, 14:25 IST
Last Updated 2 ಜನವರಿ 2026, 14:25 IST
.
.   

ನವದೆಹಲಿ: ‘ದೇಶದ ತಯಾರಿಕಾ ವಲಯದ ಚಟುವಟಿಕೆ 2025ರ ಡಿಸೆಂಬರ್‌ ತಿಂಗಳಿನಲ್ಲಿ ಎರಡು ವರ್ಷದ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ’ ಎಂದು ಎಸ್‌ ಆ್ಯಂಡ್ ಪಿ ಗ್ಲೋಬಲ್ ಸಂಸ್ಥೆಯ ಮಾಸಿಕ ಸಮೀಕ್ಷೆ ವರದಿ ಶುಕ್ರವಾರ ತಿಳಿಸಿದೆ.

ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಸಂಸ್ಥೆಯು ನಿರ್ವಹಿಸುವ ‘ಎಚ್‌ಎಸ್‌ಬಿಸಿ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್ಸ್‌ ಸೂಚ್ಯಂಕ’ವು (ಪಿಎಂಐ) ನವೆಂಬರ್‌ನಲ್ಲಿ 56.6ರಷ್ಟಿತ್ತು. ಆದರೆ, ಡಿಸೆಂಬರ್‌ನಲ್ಲಿ ಸೂಚ್ಯಂಕವು 55ಕ್ಕೆ ಇಳಿದಿದೆ. ಹೊಸ ಕಾರ್ಯಾದೇಶದಲ್ಲಿನ ಮಂದಗತಿಯು ಸೂಚ್ಯಂಕ ಇಳಿಕೆಗೆ ಕಾರಣ ಎಂದು ಹೇಳಿದೆ.

ಈ ಸೂಚ್ಯಂಕವು 50ರ ಮೇಲಿದ್ದರೆ ಸಕಾರಾತ್ಮಕ ಬೆಳವಣಿಗೆ ಎಂದು ಅರ್ಥೈಸಲಾಗುತ್ತದೆ. 50ಕ್ಕಿಂತ ಕಡಿಮೆ ಇದ್ದರೆ ಅದನ್ನು ಕುಸಿತವೆಂದು ಕಾಣಲಾಗುತ್ತದೆ.

ADVERTISEMENT

ತಯಾರಿಕಾ ವಲಯದ ಬೆಳವಣಿಗೆ ಮಂದಗೊಂಡಿದ್ದರೂ, ಉದ್ಯಮವು 2025ರ ವರ್ಷವನ್ನು ಉತ್ತಮ ಸ್ಥಿತಿಯಲ್ಲಿ ಮುಗಿಸಿದೆ. ಸರಕುಗಳಿಗೆ ಬೇಡಿಕೆ ಮಂದಗೊಂಡಿದ್ದರಿಂದ ತಯಾರಿಕೆಯು 38 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿಯಿತು. ಉದ್ಯೋಗ ಸೃಷ್ಟಿಯು ಇಳಿಕೆ ಆಯಿತು. ತಯಾರಿಕಾ ವೆಚ್ಚವು ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ತಿಳಿಸಿದೆ. 

ದೇಶದ ಸರಕುಗಳ ತಯಾರಕರು 2026ರಲ್ಲಿ ತಯಾರಿಕೆಯಲ್ಲಿ ಹೆಚ್ಚಳವನ್ನು ನಿರೀಕ್ಷಿಸುತ್ತಿದ್ದಾರೆ. ಆದರೆ ತಯಾರಕರ ಭಾವನೆಯ ಮಟ್ಟವು ಸುಮಾರು ಮೂರೂವರೆ ವರ್ಷಗಳಲ್ಲಿ ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿದಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.