ADVERTISEMENT

ಸೀಟ್‌ ಬೆಲ್ಟ್‌ ಲೋಪ ಸರಿಪಡಿಸಲಿರುವ ಮಾರುತಿ: 9,125 ವಾಹನಗಳು ವಾಪಸ್

ಪಿಟಿಐ
Published 6 ಡಿಸೆಂಬರ್ 2022, 14:19 IST
Last Updated 6 ಡಿಸೆಂಬರ್ 2022, 14:19 IST
ಮಾರುತಿ ಸುಜುಕಿ
ಮಾರುತಿ ಸುಜುಕಿ   

ನವದೆಹಲಿ: ಮಾರುತಿ ಸುಜುಕಿ ಕಂಪನಿಯು ಸಿಯಾಜ್, ಬ್ರೆಜಾ, ಎರ್ಟಿಗಾ, ಎಕ್ಸ್‌ಎಲ್‌6 ಮತ್ತು ಗ್ರ್ಯಾಂಡ್‌ ವಿಟಾರಾ ಮಾದರಿಯ ಒಟ್ಟು 9,125 ವಾಹನಗಳನ್ನು ಹಿಂದಕ್ಕೆ ಕರೆಸಿಕೊಂಡು, ಅವುಗಳ ಮುಂದಿನ ಸಾಲಿನ ಆಸನಗಳ ಸೀಟ್‌ ಬೆಲ್ಟ್‌ನಲ್ಲಿ ಇರಬಹುದಾದ ದೋಷವನ್ನು ಸರಿಪಡಿಸಿ ಕೊಡಲಿದೆ.

ನವೆಂಬರ್‌ 2ರಿಂದ 28ರ ನಡುವೆ ತಯಾರಾದ ಈ ಮಾದರಿಯ ವಾಹನಗಳನ್ನು ಹಿಂದಕ್ಕೆ ಕರೆಸಿಕೊಳ್ಳಲಾಗುತ್ತಿದೆ ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ಈ ಅವಧಿಯಲ್ಲಿ ತಯಾರಾದ ವಾಹನಗಳಲ್ಲಿ ಲೋಪ ಇದೆಯೇ ಎಂಬುದನ್ನು ಪರಿಶೀಲಿಸಿ, ಅದನ್ನು ಉಚಿತವಾಗಿ ಸರಿಪಡಿಸಿ ಕೊಡಲಾಗುವುದು ಎಂದು ಕಂಪನಿ ಹೇಳಿದೆ. ವಾಹನ ಮಾಲೀಕರಿಗೆ ಕಂಪನಿಯ ಅಧಿಕೃತ ಕಾರ್ಯಾಗಾರಗಳಿಂದ ಸಂದೇಶ ರವಾನೆಯಾಗಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.