ADVERTISEMENT

ಡೀಸೆಲ್‌ ಕಾರು ಮಾರುಕಟ್ಟೆಗೆ ಮಾರುತಿ?

ಪಿಟಿಐ
Published 13 ಡಿಸೆಂಬರ್ 2020, 19:31 IST
Last Updated 13 ಡಿಸೆಂಬರ್ 2020, 19:31 IST
ಮಾರುತಿ ಸುಜುಕಿ
ಮಾರುತಿ ಸುಜುಕಿ   

ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪನಿಯಾದ ಮಾರುತಿ ಸುಜುಕಿ, ಡೀಸೆಲ್ ಕಾರುಗಳ ಮಾರುಕಟ್ಟೆಗೆ ಪುನಃ ಲಗ್ಗೆ ಇಡುವ ಆಲೋಚನೆಯಲ್ಲಿ ಇದೆ. ಡೀಸೆಲ್‌ ಕಾರುಗಳು ದೊಡ್ಡ ಪ್ರಮಾಣದಲ್ಲಿ ಬೇಡಿಕೆ ಉಳಿಸಿಕೊಂಡಿರುವುದು, ಅದರಲ್ಲೂ ಮುಖ್ಯವಾಗಿ ಎಸ್‌ಯುವಿ ವರ್ಗದ ಡೀಸೆಲ್‌ ಕಾರುಗಳಿಗೆ ಹೆಚ್ಚಿನ ಬೇಡಿಕೆ ಇರುವುದು ಈ ಆಲೋಚನೆಗೆ ಕಾರಣ ಎಂದು ಮೂಲಗಳು ಹೇಳಿವೆ.

ಈ ವರ್ಷದ ಏಪ್ರಿಲ್‌ನಲ್ಲಿ ಬಿಎಸ್‌–6 ಮಾನದಂಡಗಳು ಜಾರಿಗೆ ಬಂದ ಕಾರಣ ಮಾರುತಿ ಸುಜುಕಿ ಕಂಪನಿಯು ಡೀಸೆಲ್ ಕಾರುಗಳ ತಯಾರಿಕೆಯನ್ನು ಕೈಬಿಟ್ಟಿತ್ತು. ಮುಂದಿನ ವರ್ಷದ ಮಧ್ಯಭಾಗದಿಂದ ಅಥವಾ ಮುಂದಿನ ವರ್ಷದ ಹಬ್ಬಗಳ ಅವಧಿಯಲ್ಲಿ ಬಿಎಸ್‌–6 ಮಾನದಂಡಗಳಿಗೆ ಅನುಗುಣವಾಗಿರುವ ಡೀಸೆಲ್ ಕಾರುಗಳನ್ನು ಮಾರುಕಟ್ಟೆಗೆ ಪುನಃ ಬಿಡುಗಡೆ ಮಾಡುವ ಆಲೋಚನೆಯೊಂದಿಗೆ ಮಾನೆಸರ್‌ನಲ್ಲಿರುವ ತಯಾರಿಕಾ ಘಟಕವನ್ನು ಮೇಲ್ದರ್ಜೆಗೇರಿಸುವ ಪ್ರಕ್ರಿಯೆಯನ್ನು ಕಂಪನಿ ಆರಂಭಿಸಿದೆ ಎಂದು ಗೊತ್ತಾಗಿದೆ.

ಬಿಎಸ್‌–6 ಮಾದರಿಯ ಡೀಸೆಲ್‌ ಕಾರುಗಳಿಗೆ ಬೇಡಿಕೆ ಬಂದರೆ, ಅಂತಹ ಕಾರುಗಳನ್ನು ಕಂಪನಿ ತಯಾರಿಸುವ ಸಾಧ್ಯತೆ ಇದೆ ಎಂದು ಕಂಪನಿಯ ಹಿರಿಯ ಅಧಿಕಾರಿಗಳು ಈ ಹಿಂದೆಯೇ ಹೇಳಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.