ADVERTISEMENT

ಇಕೊ ವ್ಯಾನ್‌ ರಿಮ್‌ ಗಾತ್ರ ಗುರುತಿಸುವಲ್ಲಿ ಲೋಪ

ಪಿಟಿಐ
Published 6 ಏಪ್ರಿಲ್ 2022, 15:46 IST
Last Updated 6 ಏಪ್ರಿಲ್ 2022, 15:46 IST

ನವದೆಹಲಿ (ಪಿಟಿಐ): ಮಾರುತಿ ಸುಜುಕಿ ಕಂಪನಿಯು ಇಕೊ ಮಾದರಿಯ 19,731 ವ್ಯಾನ್‌ಗಳನ್ನು ಹಿಂದಕ್ಕೆ ಪಡೆದು, ಚಕ್ರದ ರಿಮ್‌ ಗಾತ್ರ ಗುರುತಿಸುವಿಕೆಯಲ್ಲಿ ಆಗಿರುವ ಲೋಪವನ್ನು ಸರಿಪಡಿಸಲಿದೆ.

2021ರ ಜುಲೈ 19ರಿಂದ ಅಕ್ಟೋಬರ್‌ 5ರ ನಡುವೆ ತಯಾರಾದ ಇಕೊ ವ್ಯಾನ್‌ಗಳಲ್ಲಿ ರಿಮ್‌ ಗಾತ್ರವನ್ನು ತಪ್ಪಾಗಿ ಗುರುತು ಮಾಡಲಾಗಿದೆ ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ಗ್ರಾಹಕರಿಗೆ ಮಾರುತಿ ಸುಜುಕಿ ಅಧಿಕೃತ ವರ್ಕ್‌ಶಾಪ್‌ ಕಡೆಯಿಂದ ಮಾಹಿತಿ ರವಾನೆ ಆಗಲಿದೆ. ಗ್ರಾಹಕರು ಕಂಪನಿಯ ವೆಬ್‌ಸೈಟ್‌ಗೆ ಭೇಟಿ ನೀಡಿ, ತಮ್ಮ ವಾಹನದ ಚಾಸಿ ಸಂಖ್ಯೆ ನಮೂದಿಸಿ, ಲೋಪ ಇರುವ ವಾಹನಗಳಲ್ಲಿ ಅದೂ ಸೇರಿದೆಯೇ ಎಂಬುದನ್ನು ಪರಿಶೀಲಿಸಬಹುದು ಎಂದು ಕಂಪನಿ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.