ADVERTISEMENT

ಮೊಬೈಲ್‌ನಲ್ಲಿ ಮೀಡಿಯಾಟೆಕ್‌

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2018, 20:00 IST
Last Updated 12 ಡಿಸೆಂಬರ್ 2018, 20:00 IST

ಬೆಂಗಳೂರು: ಮೊಬೈಲ್‌ಫೋನ್‌ ತಂತ್ರಜ್ಞಾನ ಅಭಿವೃದ್ಧಿ ಸಂಸ್ಥೆ ಮೀಡಿಯಾಟೆಕ್‌, ‘ಟೆಕ್ನಾಲಜಿ ಡೈರೀಸ್‌’ ಸರಣಿಯ ಮೂರನೇ ಕಾರ್ಯಕ್ರಮವನ್ನು ನಗರದಲ್ಲಿ ಆಯೋಜಿಸಿತ್ತು.

‘ಎಲ್ಲ ಕ್ಷೇತ್ರದಲ್ಲೂ ತಂತ್ರಜ್ಞಾನ ವಿಸ್ತರಿಸುತ್ತಿದೆ. ಅದರಲ್ಲೂ ಮೊಬೈಲ್‌ಫೋನ್ ಬಳಕೆಯಿಂದಾಗಿ ಕಾರ್ಯವೈಖರಿ ಬದಲಾಗುತ್ತಿದೆ. ಹೀಗಾಗಿ ನಮ್ಮ ಸಂಸ್ಥೆ ವಿವಿಧ ಕ್ಷೇತ್ರಗಳಿಗೆ ನೆರವಾಗುವಂತೆ ಮೊಬೈಲ್‌ಫೋನ್‌ಗಳ ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿದೆ’ ಎಂದು ಮೀಡಿಯಾ ಟೆಕ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಅಂಕುರ್‌ ಜೈನ್ ತಿಳಿಸಿದರು.

‘ಮಾರುಕಟ್ಟೆಗೆ ಬರುವ ಪ್ರತಿ ಮೂರು ಮೊಬೈಲ್‌ಫೋನ್‌ಗಳ ಪೈಕಿ ಒಂದರಲ್ಲಿ ನಮ್ಮ ಸಂಸ್ಥೆಯ ತಂತ್ರಜ್ಞಾನ ಇರುತ್ತದೆ. ಪ್ರತಿ ವರ್ಷ 150 ಕೋಟಿಗೂ ಸಾಧನಗಳಲ್ಲಿ ನಮ್ಮ ಚಿಪ್‌ಗಳನ್ನು ಅಳವಡಿಸುತ್ತಿದ್ದೇವೆ’ ಎಂದರು.

ADVERTISEMENT

‘ನಮ್ಮ ಸಂಸ್ಥೆ ಅಭಿವೃದ್ಧಿಪಡಿಸಿದ ಬ್ಲೂಟೂತ್ ಮತ್ತು ಸೆಲ್ಯೂಲರ್ ಕನೆಕ್ಟಿವಿಟಿ ತಂತ್ರಜ್ಞಾನಗಳು ವ್ಯಾಪಾರ, ಕೃಷಿ, ಸಾರಿಗೆ, ಕಂದಾಯ ಮುಂತಾದ ಕ್ಷೇತ್ರಗಳಲ್ಲಿ ಉಪಯೋಗವಾಗುತ್ತಿವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.