
ಬೆಂಗಳೂರು: ಜರ್ಮನಿ ಮೂಲದ ಐಷಾರಾಮಿ ಕಾರು ತಯಾರಿಕಾ ಕಂಪನಿ ಮರ್ಸಿಡೀಸ್ ಬೆಂಜ್ ಇಂಡಿಯಾ, ಬೆಂಗಳೂರಿನಲ್ಲಿ ಹೊಸ ಐಷಾರಾಮಿ ಮಳಿಗೆ ಮತ್ತು ಸೇವಾ ಕೇಂದ್ರ ‘ವಿವಾ ಸ್ಟಾರ್’ಅನ್ನು ಉದ್ಘಾಟಿಸಿದೆ.
ಬೆಂಗಳೂರು ಮರ್ಸಿಡೀಸ್ ಬೆಂಜ್‌ನ ‘ಮೇಬ್ಯಾಕ್ ಲಾಂಜ್’ ಮತ್ತು ‘ಮೇ ಬ್ಯಾಕ್ ಐಕಾನ್ಸ್ ಆಫ್ ಲಕ್ಸುರಿ’ ಮಳಿಗೆಗಳನ್ನು ಹೊಂದಿರುವ ದೇಶದ ಮೊದಲ ನಗರವಾಗಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಇದು ಕರ್ನಾಟಕದಲ್ಲಿ ಮರ್ಸಿಡೀಸ್ ಬೆಂಜ್‌ನ ವಾಹನಗಳ ಮಾರಾಟ ಹೆಚ್ಚಳಕ್ಕೆ ಸಹಕಾರಿಯಾಗಲಿದೆ ಎಂದು ತಿಳಿಸಿದೆ.
ಇದೇ ವೇಳೆ ಕಂಪನಿಯು ಮರ್ಸಿಡೀಸ್– ಮೇಬ್ಯಾಕ್ ಜಿಎಲ್ಎಸ್ 600 ಎಸ್‌ಯುವಿ ಅನ್ನು ಬಿಡುಗಡೆ ಮಾಡಿದೆ. ಇದರ ಎಕ್ಸ್ ಷೋ ರೂಮ್ ಬೆಲೆ ₹2.75 ಕೋಟಿ. ಅಮೆರಿಕದ ಹೊರಗೆ ಈ ಎಸ್‌ಯುವಿ ಮೊದಲ ಬಾರಿಗೆ ‘ಮೇಡ್ ಇನ್ ಇಂಡಿಯಾ’ ಆಗಿ ಹೊರಬರುತ್ತಿದೆ.
ಈ ಹೊಸ ಡೀಲರ್ ಶಿಪ್ ಅನ್ನು ಮರ್ಸಿಡೀಸ್ ಬೆಂಜ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸಂತೋಷ್ ಅಯ್ಯರ್ ಹಾಗೂ ಮರ್ಸಿಡೀಸ್ ಬೆಂಜ್ ವಿವಾ ಸ್ಟಾರ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರಸಾದ್ ದೇಶಪಾಂಡೆ ಉದ್ಘಾಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.