ನವದೆಹಲಿ: ದೇಶದ ಮ್ಯೂಚುವಲ್ ಫಂಡ್ ಸಂಸ್ಥೆಗಳು ಷೇರುಪೇಟೆಯಲ್ಲಿ ಮಾಡುತ್ತಿರುವ ಹೂಡಿಕೆಯಲ್ಲಿ ಏರಿಕೆ ಕಂಡುಬಂದಿದೆ.
2020ರ ಮೊದಲ ಆರು ತಿಂಗಳಿನಲ್ಲಿ (ಜನವರಿ–ಜೂನ್) ಷೇರುಪೇಟೆಯಲ್ಲಿ ₹ 39,500 ಕೋಟಿ ಹೂಡಿಕೆ ಮಾಡಿವೆ.ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ನಾಲ್ಕು ಪಟ್ಟು ಹೆಚ್ಚಾಗಿದೆ. ಆಗ ₹ 8,735 ಕೋಟಿ ಹೂಡಿಕೆಯಾಗಿತ್ತು.
ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯಲ್ಲಿ (ಸೆಬಿ) ಈ ಮಾಹಿತಿ ಇದೆ.
ಒಟ್ಟಾರೆ ಹೂಡಿಕೆಯಲ್ಲಿ ಮಾರ್ಚ್‌ನಲ್ಲಿಯೇ ₹ 30 ಸಾವಿರ ಕೋಟಿ ಹೂಡಿಕೆಯಾಗಿದೆ. ಈ ತಿಂಗಳಿನಲ್ಲಿ ಷೇರುಪೇಟೆಯು ಅತಿಯಾದ ಮಾರಾಟ ಒತ್ತಡದಲ್ಲಿತ್ತು.
ವ್ಯವಸ್ಥಿತ ಹೂಡಿಕೆ ಯೋಜನೆಯ (ಎಸ್‌ಐಪಿ) ಮೂಲಕ ಷೇರುಗಳ ಮೇಲಿನ ಹೂಡಿಕೆಯು ಉತ್ತಮ ಗಳಿಕೆ ಕಂಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
‘ಚಂಚಲ ವಹಿವಾಟು ಮತ್ತು ಹೊಂದಾಣಿಕೆಯ ಅವಧಿಯು ಹೂಡಿಕೆದಾರರಿಗೆ ಉತ್ತಮ ಗಳಿಕೆಯ ಅವಕಾಶ ತಂದುಕೊಟ್ಟಿದೆ’ ಎಂದು ಮಾರ್ನಿಂಗ್‌ಸ್ಟಾರ್ ಇಂಡಿಯಾದ ಸಂಶೋಧನಾ ನಿರ್ದೇಶಕ ಹಿಮಾಂಶು ಶ್ರೀವಾಸ್ತವ ಹೇಳಿದ್ದಾರೆ.
‘ಸವಾಲುಗಳ ಹೊರತಾಗಿಯೂ, ಈ ವರ್ಷ ಷೇರು ಆಧಾರಿತ ಮ್ಯೂಚುವಲ್ ಪಂಡ್‌ಗಳಲ್ಲಿ ಹೂಡಿಕೆಯು ಉತ್ತಮವಾಗಿದೆ. ಸದ್ಯದ ಪರಿಸ್ಥಿತಿಯನ್ನು ಒಂದು ಅಪಾಯ ಎಂದು ಭಾವಿಸುವುದಕ್ಕಿಂತಲೂ ಅವಕಾಶವಾಗಿ ಬಳಸಿಕೊಳ್ಳುವ ಮೂಲಕ ಹೂಡಿಕೆದಾರರು ವಿವೇಚನೆಯಿಂದ ವರ್ತಿಸುತ್ತಿದ್ದಾರೆ’ ಎಂದೂ ವಿಶ್ಲೇಷಣೆ ಮಾಡಿದ್ದಾರೆ.
ಹೂಡಿಕೆ ವಿವರ (ಕೋಟಿಗಳಲ್ಲಿ)
ಜನವರಿ;₹ 1,384
ಫೆಬ್ರುವರಿ;₹ 9,863
ಮಾರ್ಚ್₹ 30,285
ಏಪ್ರಿಲ್;₹ 7,965
ಮೇ;₹ 6,522
ಜೂನ್;₹ 612
ಅಂಕಿ–ಅಂಶ
40%
ಮಾರ್ಚ್‌ನಲ್ಲಿ ಸೂಚ್ಯಂಕದ ಕುಸಿತ
₹62 ಸಾವಿರ ಕೋಟಿ
ವಿದೇಶಿ ಬಂಡವಾಳ ಹೊರಹರಿವು
₹ 8 ಸಾವಿರ ಕೋಟಿಗೂ ಅಧಿಕ
ತಿಂಗಳ ‘ಸಿಪ್’ ಹೂಡಿಕೆ ಮೊತ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.