ನವದೆಹಲಿ: 2024–2025ರ ಆರ್ಥಿಕ ವರ್ಷದಲ್ಲಿ ಸಣ್ಣ ಹಣಕಾಸು ಸಂಸ್ಥೆಗಳು (ಎಂಎಫ್‌ಐ) ಒಟ್ಟು ₹1.12 ಲಕ್ಷ ಕೋಟಿ ಕಿರುಸಾಲ ವಿತರಿಸಿವೆ.
2023–24ರ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಸಾಲ ವಿತರಣೆಯಲ್ಲಿ ಶೇ 25ರಷ್ಟು ಇಳಿಕೆಯಾಗಿದೆ ಎಂದು ಸಣ್ಣ ಹಣಕಾಸು ಸಂಸ್ಥೆಗಳ ಒಕ್ಕೂಟ (ಎಂಎಫ್‌ಐಎನ್) ಬುಧವಾರ ತಿಳಿಸಿದೆ.
ಒಟ್ಟು 2.2 ಕೋಟಿ ಖಾತೆಗಳಿಗೆ ಈ ಸಾಲವನ್ನು ನೀಡಲಾಗಿದೆ. ಪ್ರತಿ ಖಾತೆಗೆ ಸರಾಸರಿ ₹50,131 ಸಾಲ ನೀಡಲಾಗಿದೆ. ಸರಾಸರಿ ಸಾಲದ ಮೊತ್ತವು 2023–24ಕ್ಕೆ ಹೋಲಿಸಿದರೆ ಶೇ 12.3ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದೆ.
ಕಳೆದ ಆರ್ಥಿಕ ವರ್ಷದ ಮಾರ್ಚ್ ಅಂತ್ಯದ ವೇಳೆಗೆ ಉದ್ಯಮದ ಒಟ್ಟು ಸಂಪತ್ತಿನ ನಿರ್ವಹಣಾ ಮೌಲ್ಯದಲ್ಲಿ (ಎಯುಎಂ) ಶೇ 11.9ರಷ್ಟು ಇಳಿಕೆಯಾಗಿದ್ದು, ₹1.47 ಲಕ್ಷ ಕೋಟಿಯಾಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.