ADVERTISEMENT

ಮೈಂಡ್‌ಟ್ರೀ ಷೇರು ಎಲ್‌ಆ್ಯಂಡ್‌ಟಿಗೆ

ಪಿಟಿಐ
Published 1 ಮೇ 2019, 20:16 IST
Last Updated 1 ಮೇ 2019, 20:16 IST
   

ನವದೆಹಲಿ: ಮೈಂಡ್‌ಟ್ರೀನಲ್ಲಿ ಕಾಫಿ ಡೇ ಮತ್ತು ಕೆಫೆ ಕಾಫಿ ಡೇ ಮಾಲೀಕ ವಿ.ಜಿ.ಸಿದ್ಧಾರ್ಥ ಹೊಂದಿದ್ದ ಶೇ 20ರಷ್ಟು ಷೇರುಗಳನ್ನು ಮೂಲಸೌಕರ್ಯ ಸಂಸ್ಥೆ ಲಾರ್ಸನ್‌ ಆ್ಯಂಡ್‌ ಟೂಬ್ರೊ (ಎಲ್‌ಆ್ಯಂಡ್‌ಟಿ) ಖರೀದಿಸಿದೆ.

ಮುಂಬೈ ಷೇರುಪೇಟೆಯಲ್ಲಿ ಇರುವ ಮಾಹಿತಿಯ ಪ್ರಕಾರ,ಒಟ್ಟಾರೆ 3.27 ಕೋಟಿ ಷೇರುಗಳನ್ನು ₹ 3,210 ಕೋಟಿಗಳಿಗೆ ಖರೀದಿ ಮಾಡಿದೆ.

ಮೈಂಡ್‌ಟ್ರೀ ಕಂಪನಿಯನ್ನು ತನ್ನ ವಶಕ್ಕೆ ಪಡೆಯಲು ಶೇ 66ರಷ್ಟು ಷೇರುಗಳನ್ನು ₹ 10,800 ಕೋಟಿಗಳಿಗೆ ಖರೀದಿಸಲು ಎಲ್‌ಆ್ಯಂಡ್‌ಟಿ ಮುಂದಾಗಿದೆ.

ADVERTISEMENT

ಈ ಸಂಬಂಧ, ಸಂಸ್ಥೆಯಲ್ಲಿ ಕೆಫೆ ಕಾಫಿ ಡೇ ಮಾಲೀಕ ವಿ. ಜಿ. ಸಿದ್ದಾರ್ಥ ಅವರ ಶೇ 20.32ರಷ್ಟು ಷೇರುಗಳನ್ನು, ಮುಕ್ತ ಮಾರುಕಟ್ಟೆಯಿಂದ ಶೇ 15ರಷ್ಟು ಷೇರುಗಳನ್ನು ಮತ್ತು ಶೇ31ರಷ್ಟು ಷೇರುಗಳನ್ನು ಮುಕ್ತ ಕೊಡುಗೆ ಮೂಲಕ ಖರೀದಿಸಲು ಎಲ್‌ಆ್ಯಂಡ್‌ಟಿ ಉದ್ದೇಶಿಸಿದೆ. ಎಲ್‌ಆ್ಯಂಡ್‌ಟಿ ಕೊಡುಗೆಗೆ ಮೈಂಡ್‌ಟ್ರೀ ಸಹ ಸ್ಥಾಪಕರು ವಿರೋಧ ವ್ಯಕ್ತಪಡಿಸಿದ್ದಾರೆ. ಒತ್ತಾಯ
ಪೂರ್ವಕವಾಗಿ ಸ್ವಾಧೀನಕ್ಕೆ ಮುಂದಾಗಿದೆ ಎಂದು ದೂರಿದ್ದಾರೆ. ಎರಡೂ ಕಂಪನಿಗಳ ಕಾರ್ಯವೈಖರಿ ಬೇರೆ ಬೇರೆಯಾಗಿರುವುದರಿಂದ ಕಾರ್ಪೊರೇಟ್‌ ಆಡಳಿತದಲ್ಲಿ ಸಮಸ್ಯೆ ಎದುರಾಗಲಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.