
ಪಿಟಿಐನವದೆಹಲಿ: ಕನಿಷ್ಠ ಪಿಂಚಣಿಯನ್ನು ಸದ್ಯದ ₹ 1,000 ಗಳಿಂದ ಹೆಚ್ಚಿಸುವ ಸಂಬಂಧ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ಜತೆ ಚರ್ಚೆ ನಡೆಯುತ್ತಿದೆ ಎಂದು ಸೋಮವಾರ ಲೋಕಸಭೆಗೆ ಮಾಹಿತಿ ನೀಡಲಾಗಿದೆ.
ಕನಿಷ್ಠ ಪಿಂಚಣಿ ಮೊತ್ತವನ್ನು ಹೆಚ್ಚಿಸಬೇಕು ಎಂದು ಕೆಲ ಸದಸ್ಯರು ಸದನದಲ್ಲಿ ಒತ್ತಾಯಿಸಿದ್ದರು. ಕಾರ್ಮಿಕ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಅವರು ಇದಕ್ಕೆ ಉತ್ತರ ನೀಡಿದರು. ‘ಇಪಿಎಫ್‌ಒ’ದ ಟ್ರಸ್ಟಿಗಳ ಕೇಂದ್ರೀಯ ಮಂಡಳಿಯೂ ಈ ಚರ್ಚೆಯಲ್ಲಿ ಭಾಗಿಯಾಗಿದೆ. ಕನಿಷ್ಠ ಪಿಂಚಣಿಯನ್ನು ₹ 2,000ಕ್ಕೆ ಹೆಚ್ಚಿಸಿದರೆ ಸರ್ಕಾರಕ್ಕೆ ₹ 4,671 ಕೋಟಿ ಮತ್ತು ₹ 3,000ಕ್ಕೆ ಹೆಚ್ಚಿಸಿದರೆ ₹ 11,696 ಕೋಟಿ ಹೊರೆ ಬೀಳಲಿದೆ. ಮೋದಿ ಸರ್ಕಾರವೇ ಈ ಹಿಂದೆ ಕನಿಷ್ಠ ಪಿಂಚಣಿಯನ್ನು ₹ 1,000ಕ್ಕೆ ಹೆಚ್ಚಿಸಿತ್ತು’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.