ADVERTISEMENT

ಮೂನ್‌ಲೈಟಿಂಗ್‌ ಒಪ್ಪಲಾಗದು: ಹ್ಯಾಪಿಯೆಸ್ಟ್‌ ಮೈಂಡ್ಸ್‌

ಪಿಟಿಐ
Published 23 ಅಕ್ಟೋಬರ್ 2022, 13:42 IST
Last Updated 23 ಅಕ್ಟೋಬರ್ 2022, 13:42 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಮೂನ್‌ಲೈಟಿಂಗ್‌ನಲ್ಲಿ ತೊಡಗುವುದು ಗುತ್ತಿಗೆ ಒಪ್ಪಂದದ ಉಲ್ಲಂಘನೆ ಆಗಿರುವುದರಿಂದ ಅದನ್ನು ಒಪ್ಪಲಾಗದು ಎಂದು ಐ.ಟಿ. ಕಂಪನಿ ಹ್ಯಾಪಿಯೆಸ್ಟ್‌ ಮೈಂಡ್ಸ್‌ ಟೆಕ್ನಾಲಜೀಸ್‌ ಭಾನುವಾರ ಹೇಳಿದೆ.

ಕಳೆದ ಕೆಲವು ತಿಂಗಳ ಅವಧಿಯಲ್ಲಿ ಇಂತಹ ಪ್ರವೃತ್ತಿಯಲ್ಲಿ ತೊಡಗಿಕೊಂಡಿದ್ದವರನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂದೂ ಕಂಪನಿ ತಿಳಿಸಿದೆ.

ಕಂಪನಿಯ ಹೆಚ್ಚಿನ ಉದ್ಯೋಗಿಗಳು ಮೂನ್‌ಲೈಟಿಂಗ್‌ನಲ್ಲಿ ತೊಡಗಿಕೊಂಡಿಲ್ಲ ಎಂದು ಅದು ಹೇಳಿದೆ. ಆದರೆ, ಎಷ್ಟು ನೌಕರರ ವಿರುದ್ಧ ಕ್ರಮ ಜರುಗಿಸಲಾಗಿದೆ ಎನ್ನುವುದನ್ನು ಬಹಿರಂಗಗೊಳಿಸಿಲ್ಲ.

ADVERTISEMENT

‘ಗುತ್ತಿಗೆ ಒಪ್ಪಂದಕ್ಕೆ ಸಹಿ ಮಾಡಿದ್ದೀರಿ ಎಂದಾದರೆ ನಿರ್ದಿಷ್ಟ ಕಂಪನಿಗೆ ಮಾತ್ರವೇ ಕೆಲಸ ಮಾಡಲು ಒಪ್ಪಿದ್ದೀರಿ ಎಂದರ್ಥ. ಇದನ್ನು ಉದ್ಯೋಗಿಗಳಿಗೆ ಸ್ಪಷ್ಟವಾಗಿ ತಿಳಿಸಲಾಗಿದೆ’ ಎಂದು ಕಂಪನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಜೋಸೆಫ್‌ ಅನಂತರಾಜು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.