ADVERTISEMENT

ಎಂಆರ್‌ಪಿಎಲ್: ₹71 ಕೋಟಿ ನಷ್ಟ

2020–21ನೇ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2021, 18:54 IST
Last Updated 1 ಫೆಬ್ರುವರಿ 2021, 18:54 IST
ಎಂಆರ್‌ಪಿಎಲ್
ಎಂಆರ್‌ಪಿಎಲ್   

ಮಂಗಳೂರು: ಇಲ್ಲಿನ ಮಂಗಳೂರು ರಿಫೈನರಿ ಆಂಡ್‌ ಪೆಟ್ರೊಕೆಮಿಕಲ್ಸ್‌ ಲಿಮಿಟೆಡ್‌ (ಎಂಆರ್‌ಪಿಎಲ್‌)ಗೆ ಪ್ರಸಕ್ತ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ ₹71 ಕೋಟಿ ನಷ್ಟವಾಗಿದೆ.

ಕಂಪನಿಯ ಆಡಳಿತ ಮಂಡಳಿ 2020–21ರ ಡಿಸೆಂಬರ್‌ 31ಕ್ಕೆ ಕೊನೆಗೊಂಡ ಮೂರನೇ ತ್ರೈಮಾಸಿಕದ ಫಲಿತಾಂಶಗಳ ದಾಖಲೆಗೆ ಸೋಮವಾರ ಅನುಮೋದನೆ ನೀಡಿದೆ.

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, ನಿರ್ವಹಣಾ ಸಾಮರ್ಥ್ಯದಲ್ಲಿ ಹೆಚ್ಚಳವಾಗಿದೆ. ಆದರೆ, ಕೋವಿಡ್–19 ಪರಿಣಾಮಗಳಿಂದ ನಷ್ಟ ಸಂಭವಿಸಿದೆ ಎಂದು ಸಭೆ ತಿಳಿಸಿದೆ.

ADVERTISEMENT

ಮೂರನೇ ತ್ರೈಮಾಸಿಕದಲ್ಲಿ ₹14,136 ಕೋಟಿ ನಿವ್ವಳ ಆದಾಯ ಪಡೆದಿದ್ದು, ₹104 (ತೆರಿಗೆ ರಹಿತ) ನಷ್ಟವಾಗಿದೆ. ಕಳೆದ ವರ್ಷ (2019–20) ಇದೇ ಅವಧಿಯಲ್ಲಿ ₹16,745 ಕೋಟಿ ನಿವ್ವಳ ಆದಾಯ ಬಂದಿದ್ದರೂ, ₹45 ಕೋಟಿ ನಷ್ಟವಾಗಿತ್ತು.

ಈ ಆರ್ಥಿಕ ವರ್ಷದ ಮೊದಲ ಮೂರು ತ್ರೈಮಾಸಿಕಗಳಲ್ಲಿ (2020–21ರ 1ನೇ ಏಪ್ರಿಲ್‌ನಿಂದ ಡಿಸೆಂಬರ್ 31ರ ತನಕ) ₹555 ಕೋಟಿ ನಷ್ಟ ಉಂಟಾಗಿದೆ. ಒಟ್ಟು ₹30,231 ಕೋಟಿ ನಿವ್ವಳ ಆದಾಯ ಗಳಿಸಿದ್ದರೂ, ₹843 (ತೆರಿಗೆ ರಹಿತ) ನಷ್ಟ ಉಂಟಾಗಿದೆ.

ಆದಾಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಎಂಆರ್‌ಪಿಎಲ್ ಚಿಲ್ಲರೆ ವ್ಯಾಪಾರ (ಪೆಟ್ರೋಲ್ ಪಂಪ್) ಹೆಚ್ಚಳಕ್ಕೆ ಯೋಜಿಸಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.