ಮುಂಬೈ: ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಕಂಪನಿಯಾದ ಮಹಾನಗರ ಟೆಲಿಫೋನ್ ನಿಗಮವು (MTNL) ಏಳು ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ₹86.59 ಶತಕೋಟಿ ಬಾಕಿ ಉಳಿಸಿಕೊಂಡಿರುವುದಾಗಿ ಕಂಪನಿಯು ಸೋಮವಾರ ಹೇಳಿದೆ.
ಸಾಲದಾತರಿಗೆ ನೀಡಬೇಕಾದ ಮೊತ್ತವನ್ನು ಎಂಟಿಎನ್‌ಎಲ್ ತನ್ನ ಜುಲೈನ ವರದಿಯಲ್ಲಿ ಹೇಳಿದೆ.
ಇದರಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಳಗೊಂಡಿದೆ. ಒಟ್ಟು ಅಸಲು ₹77.94 ಶತಕೋಟಿ ಮತ್ತು ಬಡ್ಡಿ ₹8.65 ಕೋಟಿ ಒಳಗೊಂಡಿದೆ.
ತೀವ್ರ ಸ್ಪರ್ಧೆಯಿಂದ ಕೂಡಿರುವ ದೂರಸಂಪರ್ಕ ಮಾರುಕಟ್ಟೆಯಲ್ಲಿ ಗ್ರಾಹಕರ ಸಂಖ್ಯೆಯಲ್ಲಿ ಗಣನೀಯ ಕುಸಿತದಿಂದಾಗಿ ಕಂಪನಿ ನಷ್ಟ ಅನುಭವಿಸಿದೆ. ಸರ್ಕಾರದ ನೆರವನ್ನೇ ಅವಲಂಬಿಸಿದ್ದ ಸಂಸ್ಥೆಯು ಬ್ಯಾಂಕ್‌ಗಳಿಂದ ಪಡೆದ ಸಾಲವನ್ನು ಬಾಕಿ ಉಳಿಸಿಕೊಂಡಿದೆ. ಇದರ ಪರಿಣಾಮ ಸಾಲ ಮತ್ತು ಬಡ್ಡಿ ಹೆಚ್ಚಳವಾಗಿದೆ ಎಂದೆನ್ನಲಾಗಿದೆ.
ಜುಲೈ 31 ಅಂತ್ಯಗೊಂಡಂತೆ ಎಂಟಿಎನ್‌ಎಲ್‌ನ ಒಟ್ಟು ಬಾಕಿ ಮೊತ್ತವು ₹345 ಶತಕೋಟಿಯಷ್ಟಿದೆ. ಜೂನ್ ಅಂತ್ಯದಲ್ಲಿ ಇದು ₹344 ಶತಕೋಟಿ ಇತ್ತು. ಇದರಲ್ಲಿ ಚಿನ್ನದ ಬಾಂಡ್‌ಗಳು ಮತ್ತು ದೂರ ಸಂಪರ್ಕ ಇಲಾಖೆಗೆ ನೀಡಬೇಕಾದ ಸಾಲವೂ ಒಳಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.