ADVERTISEMENT

ಜೈವಿಕ ಔಷಧಿ ಕ್ಷೇತ್ರ: ಪ್ರಭಾವಿಗಳ ಪಟ್ಟಿಯಲ್ಲಿ ಕಿರಣ್‌ ಶಾ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2020, 19:45 IST
Last Updated 27 ಏಪ್ರಿಲ್ 2020, 19:45 IST
ಕಿರಣ್‌
ಕಿರಣ್‌   

ಬೆಂಗಳೂರು: ಜೈವಿಕ ತಂತ್ರಜ್ಞಾನ ಕಂಪನಿ ಬಯೊಕಾನ್‌ ಕಾರ್ಯನಿರ್ವಾಹಕ ಅಧ್ಯಕ್ಷೆ ಕಿರಣ್‌ ಮಜುಂದಾರ್‌ ಶಾ ಅವರು ಜೈವಿಕ ಔಷಧಿ ತಯಾರಿಕಾ ಕ್ಷೇತ್ರದ ವಿಶ್ವದ 20 ಮುಂಚೂಣಿ ಸ್ಪೂರ್ತಿದಾಯಕ ಪ್ರಭಾವಿಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ್ದಾರೆ.

ಜೈವಿಕ ಔಷಧಿಗಳ ವಿಷಯದಲ್ಲಿ ಕಿರಣ್‌ ಅವರು ಉದ್ಯಮಿಯಾಗಿ ನೀಡಿರುವ ಕೊಡುಗೆ ಮತ್ತು ವಿನೂತನ ಬಗೆಯ ಉದ್ಯಮದ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ.

‘ಇತರ ಖ್ಯಾತನಾಮರ ಸಾಲಿನಲ್ಲಿ ಮತ್ತೊಮ್ಮೆ ನಿಂತಿರುವುದು ನಿಜಕ್ಕೂ ಗೌರವದ ಸಂಗತಿಯಾಗಿದೆ. ’ಕೊರೊನಾ–2’ ವೈರಾಣುವಿನಿಂದ ತೀವ್ರವಾಗಿ ಬಾಧಿತವಾಗಿರುವ ಸದ್ಯದ ಬಿಕ್ಕಟ್ಟಿನಿಂದ ಪಾರಾಗುವ ವಿಧಾನದ ಬಗ್ಗೆ ಇಡೀ ವಿಶ್ವವು ವೈದ್ಯಕೀಯ ವಿಜ್ಞಾನದತ್ತ ನೋಡುತ್ತಿದೆ. ವೈದ್ಯ ವಿಜ್ಞಾನದ ಸಮುದಾಯವು ಈ ಸವಾಲನ್ನುಕ್ಷಿಪ್ರವಾಗಿ ಮೆಟ್ಟಿ ನಿಲ್ಲಬೇಕಾಗಿದೆ’ ಎಂದು ಶಾ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.