ADVERTISEMENT

ಮ್ಯೂಚುವಲ್‌ ಫಂಡ್‌: ನಾಮನಿರ್ದೇಶನಕ್ಕೆ ಮಾ. 31ರ ಗಡುವು

ಪಿಟಿಐ
Published 26 ಮಾರ್ಚ್ 2023, 16:20 IST
Last Updated 26 ಮಾರ್ಚ್ 2023, 16:20 IST

ನವದೆಹಲಿ (ಪಿಟಿಐ): ಮ್ಯೂಚುವಲ್‌ ಫಂಡ್‌ಗಳಲ್ಲಿ ಹಣ ತೊಡಗಿಸಿರುವವರು ಮಾರ್ಚ್‌ 31ರೊಳಗೆ ನಾಮನಿರ್ದೇಶನ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಅಥವಾ, ತಮ್ಮ ಹೂಡಿಕೆಗೆ ಯಾರನ್ನೂ ನಾಮನಿರ್ದೇಶನ ಮಾಡುವುದಿಲ್ಲ ಎಂಬ ಹೇಳಿಕೆ ಸಲ್ಲಿಸಬೇಕು.

ಈ ಕೆಲಸವನ್ನು ಮಾರ್ಚ್‌ 31ರೊಳಗೆ ಮಾಡದೆ ಇದ್ದರೆ ಮ್ಯೂಚುವಲ್‌ ಫಂಡ್ ಹೂಡಿಕೆ ಖಾತೆಗಳಿಂದ (ಫೋಲಿಯೊ) ಹಣ ಹಿಂಪಡೆಯಲು ಸಾಧ್ಯವಾಗುವುದಿಲ್ಲ.

ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) 2022ರ ಜೂನ್‌ 15ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿ, ನಾಮನಿರ್ದೇಶನ ಮಾಡುವುದನ್ನು ಅಥವಾ ಯಾರನ್ನೂ ನಾಮನಿರ್ದೇಶನ ಮಾಡುವುದಿಲ್ಲ ಎಂಬ ಹೇಳಿಕೆ ಸಲ್ಲಿಸುವುದನ್ನು ಕಡ್ಡಾಯಗೊಳಿಸಿದೆ. ಮೊದಲು ಹೀಗೆ ಮಾಡಲು 2022ರ ಆಗಸ್ಟ್‌ 1ರ ಗಡುವು ನಿಗದಿ ಮಾಡಲಾಗಿತ್ತು. ನಂತರದಲ್ಲಿ ಗಡುವನ್ನು ವಿಸ್ತರಿಸುತ್ತ ಬರಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.