ADVERTISEMENT

ಎಂಎಫ್‌: ಷೇರು ಹೂಡಿಕೆ ಹೆಚ್ಚಳ

ಪಿಟಿಐ
Published 13 ಜುಲೈ 2019, 19:46 IST
Last Updated 13 ಜುಲೈ 2019, 19:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಷೇರು ಸಂಪರ್ಕಿತಮ್ಯೂಚುವಲ್‌ ಫಂಡ್‌ ಯೋಜನೆಗಳಲ್ಲಿ ಬಂಡವಾಳ ಹೂಡಿಕೆ ಜೂನ್‌ನಲ್ಲಿ ಮೂರು ಪಟ್ಟು ಹೆಚ್ಚಾಗಿದ್ದು ₹ 2,256 ಕೋಟಿಗೆ ತಲುಪಿದೆ.

ಮೇ ತಿಂಗಳಿನಲ್ಲಿ ₹ 797 ಕೋಟಿ ಹೂಡಿಕೆಯಾಗಿತ್ತು ಎಂದು ಭಾರತೀಯ ಮ್ಯೂಚುವಲ್‌ ಫಂಡ್‌ ಸಂಸ್ಥೆಗಳ ಒಕ್ಕೂಟ (ಎಎಂಎಫ್‌ಐ) ಮಾಹಿತಿ ನೀಡಿದೆ.

‘ರಾಜಕೀಯ ಸ್ಥಿರತೆ, ಹಣದುಬ್ಬರ ಕಡಿಮೆ ಮಟ್ಟದಲ್ಲಿರುವುದು, ಆರ್‌ಬಿಐನಿಂದ ಬಡ್ಡಿದರ ಕಡಿತದ ನಿರ್ದಾರಗಳಿಂದಾಗಿ ಷೇರು ಸಂಪರ್ಕಿತ ಯೋಜನೆಗಳಲ್ಲಿ ಹೂಡಿಕೆ ಹೆಚ್ಚಾಗುತ್ತಿದೆ’ ಎಂದು ಒಕ್ಕೂಟದ ಮುಖ್ಯ ಕಾರ್ಯಕಾರಿ ಎನ್‌.ಎಸ್‌. ವೆಂಕಟೇಶ್ ಅವರು ತಿಳಿಸಿದ್ದಾರೆ.

ADVERTISEMENT

ಆದಾಯ ಮತ್ತು ಸಾಲಪತ್ರಗಳ ಯೋಜನೆಗಳಿಂದ ಬಂಡವಾಳ ಹೊರಹರಿವು ₹ 1.71 ಲಕ್ಷ ಕೋಟಿಗಳಷ್ಟಾಗಿದೆ. ಇದರಿಂದಾಗಿ ನಿರ್ವಹಣಾ ಸಂಪತ್ತು ಮೌಲ್ಯವು ₹ 25.93 ಲಕ್ಷ ಕೋಟಿಗಳಿಂದ ₹ 24.25 ಲಕ್ಷ ಕೋಟಿಗಳಿಗೆ ಇಳಿಕೆಯಾಗಿದೆ ಎಂದು ಒಕ್ಕೂಟ ತಿಳಿಸಿದೆ.

ಹೊರಹರಿವು: ವಿವಿಧ ಮ್ಯೂಚುವಲ್‌ ಫಂಡ್‌ ಯೋಜನೆಗಳಿಂದ ಜೂನ್‌ನಲ್ಲಿ ₹ 1.60 ಲಕ್ಷ ಕೋಟಿ ಬಂಡವಾಳ ಹೊರಹೋಗಿದೆ.

ಸಾಲಪತ್ರಗಳ ಆಧಾರಿತ ಯೋಜನೆಗಳ ಹೆಚ್ಚಿನ ಆಸಕ್ತಿ ತೋರದೇ ಇರುವುದರಿಂದ ಬಂಡವಾಳ ಹೊರಹರಿವು ಕಂಡುಬಂದಿದೆ.

ಮೇ ತಿಂಗಳಿನಲ್ಲಿ ₹ 76,989 ಕೋಟಿ ಹೂಡಿಕೆಯಾಗಿತ್ತು ಒಕ್ಕೂಟ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.