ADVERTISEMENT

‘ನಮ್ಮ ಮೆಟ್ರೊ’ ಟಿಕೆಟ್‌ಗೆ ನವಿ–ಒಎನ್‌ಡಿಸಿ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 13:17 IST
Last Updated 22 ನವೆಂಬರ್ 2025, 13:17 IST
ನಮ್ಮ ಮೆಟ್ರೊ
ನಮ್ಮ ಮೆಟ್ರೊ   

ಬೆಂಗಳೂರು: ಯುಪಿಐ ಮೂಲಕ ಪಾವತಿ ಸೇವೆಗಳನ್ನು ಒದಗಿಸುವ ‘ನವಿ’, ಬೆಂಗಳೂರಿನ ‘ನಮ್ಮ ಮೆಟ್ರೊ’ ಪ್ರಯಾಣಿಕರಿಗೆ ಕ್ಯೂಆರ್‌ ಕೋಡ್ ಆಧಾರಿತ ಟಿಕೆಟ್ ಖರೀದಿಸುವ ಸೌಲಭ್ಯವನ್ನು ಒದಗಿಸಿರುವುದಾಗಿ ಹೇಳಿದೆ. ಇದಕ್ಕಾಗಿ ಕಂಪನಿಯು ಒಎನ್‌ಡಿಸಿ ಜೊತೆ ಒಪ್ಪಂದ ಮಾಡಿಕೊಂಡಿದೆ.

ಬೆಂಗಳೂರಿನಲ್ಲಿ ಮಾತ್ರವೇ ಅಲ್ಲದೆ, ದೆಹಲಿ ಹಾಗೂ ಮುಂಬೈನ ಮೆಟ್ರೊ ಪ್ರಯಾಣಿಕರು ಕೂಡ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.

‘ಭಾರತದ ಮೆಟ್ರೊ ಸಾರಿಗೆ ವ್ಯವಸ್ಥೆಯನ್ನು ಪ್ರತಿದಿನ ಒಂದು ಕೋಟಿಗೂ ಹೆಚ್ಚು ಮಂದಿ ಬಳಕೆ ಮಾಡಿಕೊಳ್ಳುತ್ತಾರೆ. ಹೀಗಿದ್ದರೂ, ಅವರಲ್ಲಿ ಬಹಳಷ್ಟು ಮಂದಿ ನಗದು ಬಳಸಿ, ಸರತಿ ಸಾಲಿನಲ್ಲಿ ನಿಂತು ಟಿಕೆಟ್‌ ಪಡೆದುಕೊಳ್ಳುತ್ತಿದ್ದಾರೆ. ಒಎನ್‌ಡಿಸಿ ಜಾಲದ ಜೊತೆ ಒಪ್ಪಂದ ಮಾಡಿಕೊಂಡು ನಾವು ಮೆಟ್ರೊ ಪ್ರಯಾಣಕ್ಕೆ ಟಿಕೆಟ್ ಖರೀದಿಸುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲ್ ಆಗಿಸಿದ್ದೇವೆ’ ಎಂದು ನವಿ ಲಿಮಿಟೆಡ್‌ನ ಸಿಇಒ ಹಾಗೂ ಎಂ.ಡಿ. ರಾಜೀವ್ ನರೇಶ್ ಹೇಳಿದ್ದಾರೆ.

ADVERTISEMENT

‘ಒಎನ್‌ಡಿಸಿ ಜಾಲದಲ್ಲಿ ನವಿ ಸೇರಿಕೊಂಡಿರುವುದು ಮುಕ್ತ ನೆಟ್‌ವರ್ಕ್‌ಗಳು ಭಾರತದ ಡಿಜಿಟಲ್‌ ಕ್ಷೇತ್ರದಲ್ಲಿ ತರುತ್ತಿರುವ ಪರಿವರ್ತನೆಯನ್ನು ಹೇಳುತ್ತಿದೆ’ ಎಂದು ಒಎನ್‌ಡಿಸಿ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ ನಿತಿನ್ ನಾಯರ್ ಹೇಳಿದ್ದಾರೆ.

ನಗರಗಳ ಮೆಟ್ರೊ ಸೌಲಭ್ಯವನ್ನು ಬಳಸಿಕೊಳ್ಳುವವರ ಪೈಕಿ ಶೇಕಡ 40ಕ್ಕಿಂತ ಹೆಚ್ಚಿನ ಮಂದಿ ಈಗಲೂ ನಗದು ಹಾಗೂ ಭೌತಿಕ ಟಿಕೆಟ್‌ ಬಳಕೆ ಮಾಡುತ್ತಿದ್ದಾರೆ ಎಂದು ನವಿ ಪ್ರಕಟಣೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.