
ಮುಕೇಶ್ ಅಂಬಾನಿ
ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಭಾರತದ ಅಜೇಯ ರಕ್ಷಾ ಕವಚ’ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮುಕೇಶ್ ಅಂಬಾನಿ ಬಣ್ಣಿಸಿದ್ದಾರೆ.
‘ಜಗತ್ತು ತ್ವರಿತವಾಗಿ ಬದಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನಿಂದ ಹೊಸ ಸವಾಲುಗಳು ಮತ್ತು ಅನಿರೀಕ್ಷಿತ ಪ್ರಕ್ಷುಬ್ಧತೆ ಸೃಷ್ಟಿಯಾಗಿದೆ. ದೇಶಕ್ಕೆ ಧೈರ್ಯ ತುಂಬುವ ವಿಷಯವೆಂದರೆ ಈ ಸವಾಲುಗಳು ಭಾರತವನ್ನು ತಲುಪುವುದಿಲ್ಲ ಅಥವಾ ದೇಶದ ಜನರಿಗೆ ಸಮಸ್ಯೆ ಉಂಟು ಮಾಡುವುದಿಲ್ಲ. ಏಕೆಂದರೆ, ಪ್ರಧಾನಿ ಮೋದಿ ಅವರು ದೇಶದ ಅಜೇಯ ರಕ್ಷಾ ಕವಚವಾಗಿ ರಕ್ಷಣೆ ನೀಡುತ್ತಿದ್ದಾರೆ’ ಎಂದು ಇಲ್ಲಿ ನಡೆದ ‘ವೈಬ್ರಂಟ್ ಗುಜರಾತ್ ಪ್ರಾದೇಶಿಕ ಸಮ್ಮೇಳನ’ದಲ್ಲಿ (ವಿಜಿಆರ್‌ಸಿ) ಭಾನುವಾರ ಹೇಳಿದ್ದಾರೆ.
‘ಭಾರತವು ಭವಿಷ್ಯಕ್ಕಾಗಿ ತಯಾರಿಯನ್ನಷ್ಟೇ ನಡೆಸುತ್ತಿಲ್ಲ; ಅದು ಭವಿಷ್ಯವನ್ನು ರೂಪಿಸುವ ಕೆಲಸವನ್ನೂ ಮಾಡುತ್ತಿದೆ ಎಂದ ಅವರು, ಕಳೆದ ಐದು ವರ್ಷಗಳಲ್ಲಿ ಗುಜರಾತ್‌ನಲ್ಲಿ ₹3.5 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆ ಮಾಡಿದ್ದೇವೆ. ಮುಂದಿನ ಐದು ವರ್ಷಗಳಲ್ಲಿ ₹7 ಲಕ್ಷ ಕೋಟಿ ಹೂಡಿಕೆ ಮಾಡಲು ನಿರ್ಧರಿಸಲಾಗಿದೆ’ ಎಂದು ಹೇಳಿದ್ದಾರೆ.
ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಅನಿಶ್ಚಿತತೆ ನಡುವೆಯೂ ಭಾರತವು ಬೆಳವಣಿಗೆ ಕಾಣುತ್ತಿದೆ. ಇದು ಶ್ಲಾಘನೀಯಮುಕೇಶ್ ಅಂಬಾನಿ, ಅಧ್ಯಕ್ಷ, ರಿಲಯನ್ಸ್ ಇಂಡಸ್ಟ್ರೀಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.