ADVERTISEMENT

ನಾಸ್ಕಾಂ ಸಿಎಸ್‌ಆರ್‌ ನಾಯಕತ್ವ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2018, 20:15 IST
Last Updated 10 ಡಿಸೆಂಬರ್ 2018, 20:15 IST
ದೇಬಜನಿ ಘೋಷ್‌
ದೇಬಜನಿ ಘೋಷ್‌   

ಬೆಂಗಳೂರು: ಸಾಫ್ಟ್‌ವೇರ್ ಮತ್ತು ಸೇವಾ ಸಂಸ್ಥೆಗಳ ರಾಷ್ಟ್ರೀಯ ಒಕ್ಕೂಟದ (ನಾಸ್ಕಾಂ), ಸದುದ್ದೇಶಕ್ಕೆ ತಂತ್ರಜ್ಞಾನ ಬಳಕೆ ಕುರಿತ ‘ಕಾರ್ಪೊರೇಟ್‌ಗಳ ಸಾಮಾಜಿಕ ಹೊಣೆಗಾರಿಕೆಯ ನಾಯಕತ್ವಕ್ಕೆ ಸಂಬಂಧಿಸಿದ ಎರಡು ದಿನಗಳ ಸಮ್ಮೇಳನಕ್ಕೆ ಸೋಮವಾರ ಇಲ್ಲಿ ಚಾಲನೆ ದೊರೆಯಿತು.

ಉದ್ದಿಮೆಗಳ ಸಿಇಒಗಳು, ಎನ್‌ಜಿಒ ಮುಖ್ಯಸ್ಥರು, ಸರ್ಕಾರಿಕ ಅಧಿಕಾರಿಗಳು ‘ಸಿಎಸ್‌ಆರ್‌’ ಚಿಂತಕರು ಸೇರಿದಂತೆ 400ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ‘ಸಿಎಸ್‌ಆರ್‌’ಗೆ ಸಂಬಂಧಿಸಿದಂತೆ ಹೊಸ ವಿಧಾನ ಅಳವಡಿಕೆ, ಇಡೀ ದೇಶವು ಇದರಿಂದ ಪ್ರಯೋಜನ ಪಡೆದುಕೊಳ್ಳಲು ಅನುಸರಿಸಬೇಕಾದ ಕಾರ್ಯವಿಧಾನಗಳ ಕುರಿತು ಸಮಾವೇಶದಲ್ಲಿ ಚರ್ಚೆ ನಡೆಯಲಿದೆ.

‘ನಾಸ್ಕಾಂ’ ಅಧ್ಯಕ್ಷೆ ದೇಬಜಾನಿ ಘೋಷ್‌ ಮಾತನಾಡಿ, ‘ದೇಶ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಉದ್ದಿಮೆಗಳೆಲ್ಲ ಕೈಜೋಡಿಸಬೇಕು’ ಎಂದು ಸಲಹೆ ನೀಡಿದ್ದಾರೆ.

ADVERTISEMENT

‘ತಂತ್ರಜ್ಞರು ತಮ್ಮ ಪ್ರಸ್ತುತತೆ ಸಾಬೀತುಪಡಿಸಲು ತಮ್ಮ ಕೌಶಲವನ್ನು ಹೆಚ್ಚಿಸಿಕೊಳ್ಳುವ ಅನಿವಾರ್ಯತೆ ಇದೆ’ ಎಂದು ಅಕ್ಸೆಂಚರ್‌ ಇಂಡಿಯಾದ ಚೇರ್ಮನ್‌ ರೇಖಾ ಮೆನನ್‌ ಹೇಳಿದ್ದಾರೆ.

ನಾಸ್ಕಾಂ ಫೌಂಡೇಷನ್‌ ಅಧ್ಯಕ್ಷ ಅರುಣ್‌ ಸೇಠ್‌ ಅವರು ಮಾತನಾಡಿ, ‘ಸಮಾಜದ ಒಳಿತಿಗೆ ತಂತ್ರಜ್ಞಾನ ಬಳಸಿಕೊಂಡು ಎಲ್ಲರಿಗೂ ಅಭಿವೃದ್ಧಿಯ ಫಲ ದೊರೆಯುವಂತೆ ಮಾಡಬೇಕಾಗಿದೆ’ ಎಂದು ಸಲಹೆ ನೀಡಿದ್ದಾರೆ.

ಕೃತಕ ಬುದ್ಧಿಮತ್ತೆ, ಮಷಿನ್‌ ಲರ್ನಿಂಗ್‌, ಬ್ಲಾಕ್‌ಚೇನ್‌, ರೋಬೊಟಿಕ್ಸ್‌ ಮತ್ತಿತರ ಹೊಸ ತಂತ್ರಜ್ಞಾನ ಕ್ಷೇತ್ರದಲ್ಲಿ ದುಡಿಯುವ ತಂತ್ರಜ್ಞರ ಕೌಶಲ ಹೆಚ್ಚಿಸಲು ಸಿಎಸ್‌ಆರ್‌ ನಿಧಿಯನ್ನು ಬಳಸಿಕೊಳ್ಳಲು ನಾವು ಉದ್ದೇಶಿಸಿದ್ದೇವೆ. ಈ ಹೊಸ ತಂತ್ರಜ್ಞಾನಗಳ ನೆರವಿನಿಂದ ದಿನನಿತ್ಯ ಎದುರಾಗುವ ಹೊಸ ಹೊಸ ಸಮಸ್ಯೆಗಳನ್ನು ಬಗೆಹರಿಸಿ, ಜನಸಾಮಾನ್ಯರ ಬದುಕು ಸುಧಾರಿಸಲು ನೆರವಾಗುತ್ತಿದ್ದೇವೆ. ಸದ್ಯದ ಸವಾಲುಗಳನ್ನು ಎದುರಿಸುವುದರ ಜತೆಗೆ, ಈ ಹೊಸ ತಂತ್ರಜ್ಞಾನಗಳ ಸವಾಲು ಮತ್ತು ಅವಕಾಶಗಳ ಕುರಿತು ಈ ಸಮ್ಮೇಳನದಲ್ಲಿ ವಿಸ್ತೃತ ಚರ್ಚೆ ನಡೆಯಲಿದೆ’ ಎಂದು ನಾಸ್ಕಾಂ ಫೌಂಡೇಷನ್‌ ಸಿಇಒ ಅಶೋಕ್‌ ಪಮಿದಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.