ಮುಂಬೈ: ದೇಶದಲ್ಲಿ ಚಲಾವಣೆಯಲ್ಲಿದ್ದ ₹2,000 ಮುಖಬೆಲೆಯ ನೋಟುಗಳ ಪೈಕಿ ಶೇ 97.38ರಷ್ಟು ನೋಟುಗಳು ಬ್ಯಾಂಕ್‌ಗಳಿಗೆ ಮರಳಿವೆ. ಜನರ ಬಳಿ ಇನ್ನೂ ₹9,330 ಕೋಟಿ ಮೌಲ್ಯದ ನೋಟುಗಳು ಉಳಿದಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸೋಮವಾರ ತಿಳಿಸಿದೆ.
ಈ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯುವುದಾಗಿ ಆರ್‌ಬಿಐ ಮೇ 19ರಂದು ಹೇಳಿತ್ತು. ಅಂದು ಚಲಾವಣೆಯಲ್ಲಿದ್ದ ಈ ನೋಟುಗಳ ಮೌಲ್ಯವು ₹3.56 ಲಕ್ಷ ಕೋಟಿ ಆಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.