ADVERTISEMENT

ಏಪ್ರಿಲ್‌ನಿಂದ ಜನವರಿ 12ರವರೆಗೆ ₹16.90 ಲಕ್ಷ ಕೋಟಿ ನೇರ ತೆರಿಗೆ ಸಂಗ್ರಹ

ಪಿಟಿಐ
Published 13 ಜನವರಿ 2025, 15:26 IST
Last Updated 13 ಜನವರಿ 2025, 15:26 IST
ನೇರ ತೆರಿಗೆ ಸಂಗ್ರಹ
ನೇರ ತೆರಿಗೆ ಸಂಗ್ರಹ   

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌ನಿಂದ ಜನವರಿ 12ರ ವರೆಗೆ ₹16.90 ಲಕ್ಷ ಕೋಟಿ ನಿವ್ವಳ ನೇರ ತೆರಿಗೆ ಸಂಗ್ರಹವಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.

ಕಳೆದ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ ತೆರಿಗೆ ಸಂಗ್ರಹ ಪ್ರಮಾಣದಲ್ಲಿ ಶೇ 16ರಷ್ಟು ಏರಿಕೆಯಾಗಿದೆ ಎಂದು ಹೇಳಿದೆ.

ಕಾರ್ಪೊರೇಟ್‌ ತೆರಿಗೆ ₹7.68 ಲಕ್ಷ ಕೋಟಿ ಹಾಗೂ ಕಾರ್ಪೊರೇಟ್‌ಯೇತರ ತೆರಿಗೆ ₹8.74 ಲಕ್ಷ ಕೋಟಿ ಸಂಗ್ರಹವಾಗಿದೆ. ಷೇರು ವಹಿವಾಟು ತೆರಿಗೆ (ಎಸ್‌ಟಿಟಿ) ₹44,538 ಕೋಟಿ ಸಂಗ್ರಹವಾಗಿದೆ.

ADVERTISEMENT

ಒಟ್ಟು ₹3.74 ಲಕ್ಷ ಕೋಟಿ ಮರುಪಾವತಿ (ರೀಫಂಡ್‌) ಮಾಡಲಾಗಿದೆ. ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ 42.49ರಷ್ಟು ಏರಿಕೆಯಾಗಿದೆ. ನೇರ ತೆರಿಗೆಯ ಸರಾಸರಿ ಸಂಗ್ರಹವು ಶೇ 20ರಷ್ಟು ಏರಿಕೆಯಾಗಿದ್ದು, ₹20.64 ಲಕ್ಷ ಕೋಟಿ ಆಗಿದೆ ಎಂದು ತಿಳಿಸಿದೆ.

2024–25ನೇ ಆರ್ಥಿಕ ವರ್ಷದಲ್ಲಿ ನೇರ ತೆರಿಗೆಗಳ ಮೂಲಕ ₹22.07 ಲಕ್ಷ ಕೋಟಿ ಸಂಗ್ರಹಿಸಲು ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಗುರಿ ನಿಗದಿಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.