ಎಲ್‌ಇಡಿ ಟಿವಿ
(ಚಿತ್ರ ಕೃಪೆ: ಶಯೋಮಿ)
ನವದೆಹಲಿ: ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ಈಗ ಇರುವ ನಾಲ್ಕು ತೆರಿಗೆ ಹಂತಗಳನ್ನು ಎರಡು ಹಂತಗಳಿಗೆ ತಗ್ಗಿಸುವ ಪ್ರಸ್ತಾವಕ್ಕೆ ಜಿಎಸ್‌ಟಿ ಮಂಡಳಿಯು ಒಪ್ಪಿಗೆ ನೀಡಿದೆ.
ಈ ಎರಡು ತೆರಿಗೆ ಹಂತಗಳ (ಶೇ 5 ಮತ್ತು ಶೇ 18) ಹೊಸ ವ್ಯವಸ್ಥೆಯು ನವರಾತ್ರಿಯ ಮೊದಲ ದಿನವಾದ ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿದೆ. ಈ ಮೂಲಕ ದೇಶದ ಜನರಿಗೆ ಕೇಂದ್ರ ಸರ್ಕಾರ ದಸರಾ ಭರ್ಜರಿ ಉಡುಗೊರೆ ನೀಡಿದೆ.
'ನೆಕ್ಸ್ಟ್-ಜೆನ್ ಜಿಎಸ್‌ಟಿ ಪರಿಷ್ಕರಣೆ' | ಅಗ್ಗವಾಗಲಿದೆ ಎಲೆಕ್ಟ್ರಾನಿಕ್ಸ್ ವಸ್ತುಗಳು
ಶೇ 28ರಷ್ಟು ಜಿಎಸ್‌ಟಿ ಶೇ 18ಕ್ಕೆ ಇಳಿಕೆ:
*ಟಿ.ವಿ ಸೇರಿದಂತೆ ಗ್ರಾಹಕ ಬಳಕೆಯ ಎಲೆಕ್ಟ್ರಾನಿಕ್ಸ್ ಸರಕುಗಳ ಮೇಲಿನ ಶೇ 28ರಷ್ಟು ತೆರಿಗೆಯನ್ನು ಶೇ18ಕ್ಕೆ ಇಳಿಸಲಾಗುವುದು
*ಏರ್ ಕಂಡಿಷನರ್‌ಗಳು,
*ಟೆಲಿವಿಷನ್ (32 ಇಂಚಿಗೂ ಅಧಿಕ)
*ಎಲ್‌ಇಡಿ, ಎಲ್‌ಸಿಡಿ ಟಿವಿ
*ಮಾನಿಟರ್, ಪ್ರಾಜೆಕ್ಟರ್
*ಡಿಷ್ ವಾಶರ್ ಮೆಶಿನ್,
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.