ನಿತಿನ್ ಗಡ್ಕರಿ
–ಪಿಟಿಐ ಚಿತ್ರ
ನವದೆಹಲಿ: ‘ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ಆರ್ಥಿಕ ಮುಗ್ಗಟ್ಟಿಗೆ ಸಿಲುಕಿಲ್ಲ. ಟೋಲ್ ಸಂಗ್ರಹದಲ್ಲಿ ಸುಧಾರಣೆ ಹಾಗೂ ಆಸ್ತಿ ನಗದೀಕರಣದ ಮೂಲಕ ಸಾಲ ತೀರಿಸಲು ಸಶಕ್ತವಾಗಿದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಹೆದ್ದಾರಿಗಳ ಅಭಿವೃದ್ಧಿಗಾಗಿ ಮೂಲ ಸೌಕರ್ಯ ಟ್ರಸ್ಟ್ ಮೂಲಕ ಪ್ರಾಧಿಕಾರವು ಹಣ ಸಂಗ್ರಹಿಸುತ್ತದೆ. ಇದರಡಿ ಸಂಗ್ರಹವಾದ ಹಣದಲ್ಲಿ ಕಳೆದ ವರ್ಷ ₹6,350 ಕೋಟಿ ಹಾಗೂ ಪ್ರಸಕ್ತ ಹಣಕಾಸು ವರ್ಷದ ಜುಲೈವರೆಗೆ ₹9,350 ಕೋಟಿ ಸಾಲ ಮರುಪಾವತಿ ಮಾಡಿದೆ ಎಂದು ಅವರು, ಲೋಕಸಭೆಗೆ ಗುರುವಾರ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
‘2023–24ರಿಂದ ಮ್ಯೂಚುವಲ್ ಫಂಡ್‌ಗಳ ಮೂಲಕ ಹಣ ಸಂಗ್ರಹಿಸುವಂತೆ ಪ್ರಾಧಿಕಾರಕ್ಕೆ ಸರ್ಕಾರವು ಸೂಚಿಸಿಲ್ಲ. ಹಾಗಾಗಿ, ಸಾಲದ ಪ್ರಮಾಣವು ಇಳಿಕೆಯಾಗುತ್ತಿದೆ’ ಎಂದು ಹೇಳಿದ್ದಾರೆ.
ಎನ್‌ಎಚ್‌ಎಐನ ಒಟ್ಟು ಸಾಲದ ಮೊತ್ತ ₹3.35 ಲಕ್ಷ ಕೋಟಿ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.