ADVERTISEMENT

ಅರ್ಜಿ ಶುಲ್ಕ ಇಳಿಸಿದ ಎನ್‌ಐಎಫ್‌ಟಿ: ಕೇಂದ್ರ ಜವಳಿ ಸಚಿವಾಲಯ

ಪಿಟಿಐ
Published 19 ಡಿಸೆಂಬರ್ 2025, 13:31 IST
Last Updated 19 ಡಿಸೆಂಬರ್ 2025, 13:31 IST
   

ನವದೆಹಲಿ: 2026–27ನೇ ಸಾಲಿನ ಸ್ನಾತಕ ಪದವಿ ಮತ್ತು ಸ್ನಾತಕೋತ್ತರ ಪದವಿಯ ವಿವಿಧ ಕೋರ್ಸ್‌ಗಳಿಗೆ ನಡೆಸುವ ಪ್ರವೇಶ ಪರೀಕ್ಷೆಯ ಅರ್ಜಿ ಶುಲ್ಕವನ್ನು ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಫ್ಯಾಶನ್‌ ಟೆಕ್ನಾಲಜಿ (ಎನ್‌ಐಎಫ್‌ಟಿ) ಕಡಿಮೆ ಮಾಡಿದೆ ಎಂದು ಕೇಂದ್ರ ಜವಳಿ ಸಚಿವಾಲಯ ಶುಕ್ರವಾರ ತಿಳಿಸಿದೆ.

ಈ ಮೊದಲು ಸಾಮಾನ್ಯ, ಒಬಿಸಿ (ಎನ್‌ಸಿಎಲ್‌) ಮತ್ತು ಇಡಬ್ಲ್ಯುಎಸ್ ವರ್ಗದ ವಿದ್ಯಾರ್ಥಿಗಳಿಗೆ ಅರ್ಜಿ ಶುಲ್ಕ ₹3 ಸಾವಿರವಿತ್ತು. ಅದನ್ನು ಈಗ ₹2 ಸಾವಿರಕ್ಕೆ ಇಳಿಸಿದೆ. ಎಸ್‌ಸಿ, ಎಸ್‌ಟಿ ಮತ್ತು ಪಿಡಬ್ಲ್ಯುಡಿ ಅಭ್ಯರ್ಥಿಗಳ ಶುಲ್ಕವನ್ನು ₹1,500ರಿಂದ ₹500ಕ್ಕೆ ಇಳಿಸಿದೆ.

ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಜನವರಿ 6 ಕೊನೆಯ ದಿನವಾಗಿದೆ. ದಂಡದೊಂದಿಗೆ ಜನವರಿ 7ರಿಂದ 10ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಫೆಬ್ರುವರಿ 8ರಂದು ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.