ADVERTISEMENT

ರೈತರ ನೆರವಿಗೆ ನಿಂಜಾಕಾರ್ಟ್‌

​ಪ್ರಜಾವಾಣಿ ವಾರ್ತೆ
Published 1 ಮೇ 2020, 19:45 IST
Last Updated 1 ಮೇ 2020, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ತಾಜಾ ಉತ್ಪನ್ನಗಳ ಸರಬರಾಜು ಸಂಸ್ಥೆಯಾದ ನಿಂಜಾಕಾರ್ಟ್, ರೈತರಿಗೆ ನೆರವು ನೀಡಲು ಮುಂದಾಗಿದೆ.

ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಹುಡುಕಲು ಹೆಣಗಾಡುತ್ತಿರುವ ರೈತರು ಈಗ ನಿಂಜಾಕಾರ್ಟ್ ಮೂಲಕ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಬಹುದು. ದೇಶದಾದ್ಯಂತ ಇರುವ ನಿಂಜಾಕಾರ್ಟ್‍ನ ವ್ಯವಸ್ಥಿತ ಸರಬರಾಜು ವ್ಯವಸ್ಥೆಯಡಿ ರೈತರ ಉತ್ಪನ್ನಗಳನ್ನು ತೋಟದಿಂದ ನೇರವಾಗಿ ಖರೀದಿಸಿ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ವಿತರಿಸುವ ವ್ಯವಸ್ಥೆ ಇದಾಗಿದೆ.

‘ಸ್ಥಳೀಯ ದಿನಸಿ ಅಂಗಡಿಗಳ ಸಹಭಾಗಿತ್ವದೊಂದಿಗೆ ಪ್ರಾರಂಭಿಸಲಾಗುವ ‘ಕೃಷಿಭೂಮಿ ಫಲಗೊಳಿಸಿ’ ನೆರವು ಕಾರ್ಯಕ್ರಮವು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಜಾರಿಗೆ ತರಲಾಗಿದೆ.ಗ್ರಾಹಕರು ಜೊಮ್ಯಾಟೊ, ಸ್ವಿಗ್ಗಿ, ಮತ್ತು ಡಂಜೊ ಮೂಲಕ ತಾಜಾ ತರಕಾರಿ ಮತ್ತು ಹಣ್ಣುಗಳ ಖರೀದಿಗೆ ಬೇಡಿಕೆ ಸಲ್ಲಿಸಬಹುದಾಗಿದೆ’ ಎಂದು ನಿಂಜಾಕಾರ್ಟ್‌ನ ಸಿಇಒ ತಿರುಕುಮಾರನ್ ನಾಗರಾಜನ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.