ADVERTISEMENT

ಬಿಎಸ್‌ಎನ್‌ಎಲ್‌ ಅನ್ನು ಕಾಂಗ್ರೆಸ್‌ ಅವಸಾನದತ್ತ ದೂಡಿತ್ತು: ನಿರ್ಮಲಾ ಸೀತಾರಾಮನ್‌

ಪಿಟಿಐ
Published 9 ಫೆಬ್ರುವರಿ 2022, 10:41 IST
Last Updated 9 ಫೆಬ್ರುವರಿ 2022, 10:41 IST
ನಿರ್ಮಲಾ ಸೀತಾರಾಮನ್‌
ನಿರ್ಮಲಾ ಸೀತಾರಾಮನ್‌   

ನವದೆಹಲಿ: ‘ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರವು ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಕಂಪನಿಯನ್ನು ಬಹುತೇಕ ಅವಸಾನದತ್ತ ದೂಡಿತ್ತು. ನರೇಂದ್ರ ಮೋದಿ ನೇತೃತ್ವದ ಸರ್ಕಾರವು 4ಜಿ ತರಂಗಾಂತರ ಖರೀದಿಸಲು ಮತ್ತು ಸ್ಪರ್ಧಾತ್ಮಕವಾಗಲು ಕಂಪನಿಗೆ ಹಣ ನೀಡುತ್ತಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಕೇಂದ್ರ ಸರ್ಕಾರವು ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಮತ್ತು ಎಂಟಿಎನ್‌ಎಲ್‌ ಅನ್ನು ನಾಶಪಡಿಸುತ್ತಿದ್ದು, ಖಾಸಗಿ ವಲಯದ ವೊಡಾಫೋನ್‌ ಐಡಿಯಾ ಕಂಪನಿಗೆ ನೆರವು ನೀಡುತ್ತಿದೆ ಎಂದು ಶಿವಸೇನಾ ಸದಸ್ಯ ಅರವಿಂದ್ ಸಾವಂತ್‌ ಅವರು ಲೋಕಸಭೆಯಲ್ಲಿ ಸರ್ಕಾರದ ವಿರುದ್ಧ ಆರೋಪ ಮಾಡಿದ‌್ದರು. ಈ ಕುರಿತು ನಿರ್ಮಲಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.

‘ಬಿಎಸ್‌ಎನ್‌ಎಲ್‌ ನಮ್ಮ ಅಮೂಲ್ಯ ಆಸ್ತಿ. 4ಜಿ ತರಂಗಾಂತರ ಖರೀದಿಸಲು ಮತ್ತು ಸ್ಪರ್ಧಾತ್ಮಕವಾಗಲು ನಾವು ಕಂಪನಿಗೆ ಹಣ ನೀಡುತ್ತಿದ್ದೇವೆ’ ಎಂದು ಬಜೆಟ್‌ ಮೇಲಿನ ಚರ್ಚೆಯ ಸಂದರ್ಭದಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.