ADVERTISEMENT

ನವೋದ್ಯಮಗಳಿಗೆ ಸಚಿವೆ ನಿರ್ಮಲಾ ಸಲಹೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 17:10 IST
Last Updated 26 ನವೆಂಬರ್ 2022, 17:10 IST

ಬೆಂಗಳೂರು (ಪಿಟಿಐ): ಹವಾಮಾನ ಬದಲಾವಣೆ, ಸಿರಿಧಾನ್ಯ ಉತ್ಪಾದನೆ ಮತ್ತು ರೈತರ ಸ್ಥಿತಿ ಸುಧಾರಿಸುವಂತಹ ಹೆಚ್ಚು ಆಕರ್ಷಕವಲ್ಲದ ಕ್ಷೇತ್ರಗಳ ಕಡೆಗೂ ಗಮನ ಹರಿಸುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ನವೋದ್ಯಮಗಳಿಗೆ ಸಲಹೆ ನೀಡಿದರು.

ನವೋದ್ಯಮಗಳಿಗೆ ಉತ್ತೇಜನ ನೀಡುವ ರಾಷ್ಟ್ರ ಮಟ್ಟದ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆಗಳಿಂದಾಗಿ ದೇಶದ ಕೃಷಿ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ಹೀಗಾಗಿ ಹವಾಮಾನ ಬದಲಾವಣೆ ತಡೆಯಲು ಪರಿಹಾರ ಹುಡುಕುವ ನಿಟ್ಟಿನಲ್ಲಿ ನವೋದ್ಯಮಗಳು ಕೆಲಸ ಮಾಡುವ ಅಗತ್ಯ ಇದೆ ಎಂದರು.

ರಕ್ಷಣಾ ಉಪಕರಣಗಳು, ನವೀಕರಿಸಬಲ್ಲ ಇಂಧನ, ಸ್ಯಾಟಲೈಟ್ಸ್‌, ಬಾಹ್ಯಾಕಾಶ ತಂತ್ರಜ್ಞಾನ ಇವೆಲ್ಲವೂ ಮುಖ್ಯ. ಆದರೆ, ಈ ಎಲ್ಲಾ ಕ್ಷೇತ್ರಗಳನ್ನೂ ಈಗಾಗಲೇ ನೀವು ತೊಡಗಿಸಿಕೊಂಡಿದ್ದೀರಿ. ಹೀಗಾಗಿ ಹೆಚ್ಚು ಆಕರ್ಷಕ ಅಲ್ಲದೆ ಕ್ಷೇತ್ರಗಳಲ್ಲಿಯೂ ಕೆಲಸ ಮಾಡುವಂತೆ ಕೇಳುತ್ತಿದ್ದೇನೆ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.