ADVERTISEMENT

ನಿಸ್ಸಾನ್‌ನಿಂದ ಮ್ಯಾಗ್ನೈಟ್ ಕುರೊ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 15:41 IST
Last Updated 6 ಆಗಸ್ಟ್ 2025, 15:41 IST
ನಿಸ್ಸಾನ್‌ ಮ್ಯಾಗ್ನೈಟ್ ಕುರೊ
ನಿಸ್ಸಾನ್‌ ಮ್ಯಾಗ್ನೈಟ್ ಕುರೊ   

ಬೆಂಗಳೂರು: ನಿಸ್ಸಾನ್ ಮೋಟರ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಕಂಪನಿಯು ಹೊಸ ನಿಸ್ಸಾನ್‌ ಮ್ಯಾಗ್ನೈಟ್ ಕುರೊ ವಿಶೇಷ ಆವೃತ್ತಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಆರಂಭಿಕ ಬೆಲೆ ₹8.30 ಲಕ್ಷ.

ಕಪ್ಪು ಬಣ್ಣದ ಮ್ಯಾಗ್ನೈಟ್ ಕುರೊ ವಿಶೇಷ ಆವೃತ್ತಿಯ ವಾಹನವನ್ನು ನಿಸ್ಸಾನ್‌ನ ಎಲ್ಲ ಡೀಲರ್‌ಶಿಪ್‌ಗಳಲ್ಲಿ ಮತ್ತು ನಿಸ್ಸಾನ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ₹11 ಸಾವಿರ ಪಾವತಿಸುವ ಮೂಲಕ ಬುಕ್ ಮಾಡಬಹುದು ಎಂದು ಕಂಪನಿ ತಿಳಿಸಿದೆ.

ವಿಶೇಷಗಳು: ಈ ವಾಹನವು ಟರ್ಬೊ-ಪೆಟ್ರೋಲ್ ಮತ್ತು ಸಾಮಾನ್ಯ ಪೆಟ್ರೋಲ್ ಪವರ್‌ಟ್ರೇನ್‌ ಆಯ್ಕೆಗಳಲ್ಲಿ ಲಭ್ಯವಿದೆ. ಪಿಯಾನೋ ಬ್ಲಾಕ್ ಫ್ರಂಟ್ ಗ್ರಿಲ್, ಡೈಮಂಡ್‌ ಕಟ್‌ ಅಲಾಯ್‌ ವೀಲ್‌ಗಳು ಮತ್ತು ಕಪ್ಪು ಬಣ್ಣ ಡೋರ್‌ ಹ್ಯಾಂಡಲ್‌ಗಳನ್ನು ಹೊಂದಿದೆ.

ADVERTISEMENT

6 ಏರ್‌ಬ್ಯಾಗ್‌ಗಳು, ಎಬಿಎಸ್+ಇಬಿಡಿ, ಬ್ರೇಕ್ ಅಸಿಸ್ಟ್, ಟಿಪಿಎಂಎಸ್‌ ಸೇರಿದಂತೆ 40ಕ್ಕೂ ಹೆಚ್ಚು ಸುರಕ್ಷತಾ ವೈಶಿಷ್ಟ್ಯಗಳನ್ನು ಇದು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.