ADVERTISEMENT

ವಿದ್ಯುತ್ ಚಾಲಿತ ದ್ವಿಚಕ್ರ, ತ್ರಿಚಕ್ರಕ್ಕೆ ಆದ್ಯತೆ

ನೀತಿ ಆಯೋಗದ ಸಿಇಒ ಅಮಿತಾಬ್‌ ಕಾಂತ್ ಹೇಳಿಕೆ

ಪಿಟಿಐ
Published 27 ಜುಲೈ 2019, 19:45 IST
Last Updated 27 ಜುಲೈ 2019, 19:45 IST
ಅಮಿತಾಬ್‌
ಅಮಿತಾಬ್‌   

ಅಹಮದಾಬಾದ್‌: ‘ದೇಶದಲ್ಲಿ ವಿದ್ಯುತ್‌ ಚಾಲಿತ (ಇವಿ) ವಾಹನಗಳ ಅಳವಡಿಕೆಗೆ ಉತ್ತಮ ಕಾರ್ಯ ಯೋಜನೆ ಹೊಂದಿದ್ದೇವೆ’ ಎಂದು ನೀತಿ ಆಯೋಗದ ಸಿಇಒ ಅಮಿತಾಬ್‌ ಕಾಂತ್‌ ತಿಳಿಸಿದ್ದಾರೆ.

‘ವಿದ್ಯುತ್‌ ಚಾಲಿತ ದ್ವಿಚಕ್ರ, ತ್ರಿಚಕ್ರ ಮತ್ತು ಸಾರ್ವಜನಿಕ ಸಾರಿಗೆ ಹಾಗೂ ಬ್ಯಾಟರಿಗಳ ತಯಾರಿಕೆಗೆಆದ್ಯತೆ ನೀಡಬೇಕಿದೆ’ ಎಂದು ಹೇಳಿದರು.

ಸುಸ್ಥಿರ ಚಲನಶೀಲತೆ ವಿಷಯದ ಕುರಿತು ನಡೆದ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೊದಲ ಹಂತದಲ್ಲಿ ದ್ವಿಚಕ್ರ, ತ್ರಿಚಕ್ರ, ಬಸ್‌ಗಳ ಶೇ 80ರಷ್ಟು ಬಿಡಿಭಾಗಗಳ ದೇಶಿ ತಯಾರಿಕೆಗೆ ಗಮನ ನೀಡಬೇಕು ಎಂದಿದ್ದಾರೆ.

ADVERTISEMENT

‘ಸ್ಥಳೀಯವಾಗಿ ಬ್ಯಾಟರಿ ತಯಾರಿಕೆಗೆ ಉತ್ತೇಜನ ನೀಡ ಬೇಕಿದೆ.ವಿದ್ಯುತ್‌ ವಾಹನಗಳ ಒಟ್ಟಾರೆ ವೆಚ್ಚದಲ್ಲಿ ಶೇ 40ರಷ್ಟು ಬ್ಯಾಟರಿಗೆ ತಗಲುತ್ತದೆ. ಹೀಗಾಗಿದೇಶದಲ್ಲಿ ಬ್ಯಾಟರಿ ತಯಾರಿಸುವವರಿಗೆ ಹೆಚ್ಚಿನ ಮಾರುಕಟ್ಟೆ ಅವಕಾಶಗಳು ತೆರೆದುಕೊಳ್ಳಲಿವೆ.

‘ಪರಿಸರ ಸ್ನೇಹಿ ಸಾರಿಗೆ ಬಳಕೆಯಿಂದ ದೇಶವು ಕಚ್ಚಾ ತೈಲದ ಆಮದಿನ ಮೇಲೆ ಮಾಡುವ ವೆಚ್ಚ ಕಡಿಮೆಯಾಗಲಿದೆ. ಇದರಿಂದಾಗಿ ದೇಶದ ವ್ಯಾಪಾರ ಕೊರತೆ ಅಂತರವೂ ತಗ್ಗಲಿದೆ’ ಎಂದು ಕಾಂತ್‌ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.