ADVERTISEMENT

ಎನ್‌ಜಿಒಗಳಿಗೆ ‘ನೀತಿ’ ಮೊರೆ

ಪಿಟಿಐ
Published 5 ಏಪ್ರಿಲ್ 2020, 19:45 IST
Last Updated 5 ಏಪ್ರಿಲ್ 2020, 19:45 IST
ನೀತಿ ಆಯೋಗ
ನೀತಿ ಆಯೋಗ   

ನವದೆಹಲಿ: ಕೊರೊನಾ ವೈರಸ್‌ನಿಂದ ತೀವ್ರವಾಗಿ ಬಾಧಿತವಾಗಿರುವ ಪ್ರದೇಶಗಳನ್ನು ಗುರುತಿಸಲು ಮತ್ತು ಸಂಕಷ್ಟಕ್ಕೀಡಾದವರಿಗೆ ಅಗತ್ಯ ಸೇವೆ ಒದಗಿಸಲು ಸರ್ಕಾರಿಯೇತರ ಸ್ವಯಂ ಸೇವಾ ಸಂಸ್ಥೆಗಳು (ಎನ್‌ಜಿಒ) ಮುಂದೆ ಬರಬೇಕು ಎಂದು ನೀತಿ ಆಯೋಗವು ಮನವಿ ಮಾಡಿಕೊಂಡಿದೆ.

ಜಿಲ್ಲಾ ಮಟ್ಟದಲ್ಲಿ ‘ಎನ್‌ಜಿಒ’ ಮತ್ತು ಸಮುದಾಯ ಸಂಘಟನೆಗಳ ಸದಸ್ಯರ ಸೇವೆ ಬಳಸಿಕೊಳ್ಳಲು ಸ್ಥಳೀಯ ಆಡಳಿತಗಳಿಗೆ ತಾಕೀತು ಮಾಡಬೇಕು ಎಂದು ನೀತಿ ಆಯೋಗದ ಸಿಇಒ ಅಮಿತಾಭ್‌ ಕಾಂತ್‌ ಅವರು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ದೇಶದಲ್ಲಿ ನೋಂದಾಯಿತ 92 ಸಾವಿರ ಎನ್‌ಜಿಒ ಮತ್ತು ಸಮುದಾಯ ಸಂಘಟನೆಗಳ ಸಹಕಾರವನ್ನೂ ಕೋರಿ ಪತ್ರ ಬರೆದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.