ADVERTISEMENT

ವಿದ್ಯುತ್‌ ಚಾಲಿತ ವಾಹನಗೆ ಗಡುವು ಇಲ್ಲ’

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2019, 20:00 IST
Last Updated 21 ಆಗಸ್ಟ್ 2019, 20:00 IST
ev
ev   

ನವದೆಹಲಿ: ವಿದ್ಯುತ್‌ ಚಾಲಿತ ವಾಹನ (ಇವಿ) ಬಳಕೆಗೆ ಕೇಂದ್ರ ಸರ್ಕಾರ ಯಾವುದೇ ಗಡುವು ನಿಗದಿಪಡಿಸಿಲ್ಲ ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2025ರ ಗಡುವು ನಿಗದಿಪಡಿಸಿ ವಿದ್ಯುತ್‌ ಚಾಲಿತ ವಾಹನಗಳಿಗೆ ಬದಲಾಗುವ ಬಗ್ಗೆ ಎರಡು ವಾರಗಳ ಒಳಗಾಗಿ ಸಲಹೆ ನೀಡುವಂತೆದ್ವಿಚಕ್ರ ಮತ್ತು ತ್ರಿಚಕ್ರ ತಯಾರಕರಿಗೆ ನೀತಿ ಆಯೋಗವು ಜೂನ್‌ನಲ್ಲಿ ಸೂಚನೆ ನೀಡಿತ್ತು. ಈ ಕುರಿತು ಅವರು ಪ್ರತಿಕ್ರಿಯೆ ನೀಡಿದ್ದಾರೆ.

2023ರ ಒಳಗಾಗಿ ತ್ರಿಚಕ್ರ ಮತ್ತು 2025ರ ಒಳಗಾಗಿ 150ಸಿಸಿಗಿಂತಲೂ ಕಡಿಮೆ ಎಂಜಿನ್‌ ಸಾಮರ್ಥ್ಯದ ದ್ವಿಚಕ್ರ ವಾಹನಗಳು ವಿದ್ಯುತ್‌ ಚಾಲಿತವಾಗಿರಬೇಕು ಎಂದು ನೀತಿ ಆಯೋಗ ಸಲಹೆ ನೀಡಿದೆ.

ADVERTISEMENT

ಇದಕ್ಕೆ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಈ ರೀತಿ ಗಡುವು ನೀಡುವುದರಿಂದ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದ್ದು, ಉದ್ಯೋಗ ನಷ್ಟಕ್ಕೆ ಕಾರಣವಾಗಲಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.