ADVERTISEMENT

ವೈಯಕ್ತಿಕ ಬಳಕೆಯ ವಸತಿ ಕಟ್ಟಡಕ್ಕೆ ಜಿಎಸ್‌ಟಿ ಇಲ್ಲ: ಕೇಂದ್ರ ಸರ್ಕಾರ

ಪಿಟಿಐ
Published 12 ಆಗಸ್ಟ್ 2022, 13:17 IST
Last Updated 12 ಆಗಸ್ಟ್ 2022, 13:17 IST
   

ನವದೆಹಲಿ: ಖಾಸಗಿ ವ್ಯಕ್ತಿಗಳಿಗೆ ವೈಯಕ್ತಿಕ ಬಳಕೆಗಾಗಿ ಬಾಡಿಗೆಗೆ ನೀಡಿರುವ ವಸತಿ ಕಟ್ಟಡಗಳಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನ್ವಯವಾಗುವುದಿಲ್ಲ ಎಂದು ಕೇಂದ್ರ ಸರ್ಕಾರವು ಶುಕ್ರವಾರ ಸ್ಪಷ್ಟಪಡಿಸಿದೆ.

ಬಾಡಿಗೆಗೆ ಇರುವವರು ಪಾವತಿ ಮಾಡುವ ಬಾಡಿಗೆ ಮೊತ್ತದ ಮೇಲೆ ಶೇಕಡ 18ರಷ್ಟು ಜಿಎಸ್‌ಟಿ ಕೊಡಬೇಕಾಗುತ್ತದೆ ಎಂಬ ವರದಿಗಳು ತಪ್ಪು ಎಂದು ಸರ್ಕಾರವು ಹೇಳಿದೆ.

ವಸತಿ ಕಟ್ಟಡವನ್ನು ವಾಣಿಜ್ಯ ಸಂಸ್ಥೆಗೆ ಬಾಡಿಗೆಗೆ ನೀಡಿದಾಗ ಮಾತ್ರ ಜಿಎಸ್‌ಟಿ ಸಂಗ್ರಹ ಮಾಡಲಾಗುತ್ತದೆ ಎಂದು ಕೇಂದ್ರವು ಟ್ವೀಟ್ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.