ADVERTISEMENT

ಜಿಎಸ್‌ಟಿ ದರದಲ್ಲಿ ಬದಲಾವಣೆ ಇಲ್ಲ: ಸುಶೀಲ್‌ ಕುಮಾರ್ ಮೋದಿ

ಪಿಟಿಐ
Published 21 ಡಿಸೆಂಬರ್ 2019, 19:55 IST
Last Updated 21 ಡಿಸೆಂಬರ್ 2019, 19:55 IST
ಸುಶೀಲ್‌ ಕುಮಾರ್ ಮೋದಿ
ಸುಶೀಲ್‌ ಕುಮಾರ್ ಮೋದಿ   

ನವದೆಹಲಿ: ‘ವರಮಾನದಲ್ಲಿ ಸ್ಥಿರತೆ ಸಾಧಿಸದ ಹೊರತು ಜಿಎಸ್‌ಟಿ ದರದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ’ ಎಂದುಐಜಿಎಸ್‌ಟಿ ಸಚಿವರ ಸಮಿತಿ ಸಂಚಾಲಕ ಸುಶೀಲ್‌ ಕುಮಾರ್ ಮೋದಿ ತಿಳಿಸಿದ್ದಾರೆ.

ಸದ್ಯದ ಮಟ್ಟಿಗೆ ಸರಕುಗಳ ತೆರಿಗೆ ದರದಲ್ಲಿ ಏರಿಕೆ ಅಥವಾ ಇಳಿಕೆ ಮಾಡುವುದು ಹಾಗೂ ತೆರಿಗೆ ದರಗಳಲ್ಲಿಯೇ ಬದಲಾವಣೆ ಮಾಡುವಂತಹಾ ನಿರ್ಧಾರಗಳು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

‘ಖರೀದಿ ಸಾಮರ್ಥ್ಯ ಇಳಿಮುಖವಾಗಿದೆ. ಹೀಗಾಗಿ ರಾಜ್ಯಗಳು ಜಿಎಸ್‌ಟಿ ದರದಲ್ಲಿ ಇಳಿಕೆ ಮಾಡುವುದಕ್ಕೆ ಒಪ್ಪಿಗೆ ನೀಡುತ್ತಿಲ್ಲ. ಜಿಎಸ್‌ಟಿ ದರದಲ್ಲಿ (ಶೇ 5, ಶೇ 12, ಶೇ 18, ಶೇ 28) ಬದಲಾವಣೆ ಮಾಡಲೂ ಇದು ಸೂಕ್ತ ಸಮಯ ಅಲ್ಲ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.