ADVERTISEMENT

ನೋಟುಗಳಲ್ಲಿ ಗಾಂಧೀಜಿ ಚಿತ್ರ ಬದಲಿಸುವ ಪ್ರಸ್ತಾವ ಇಲ್ಲ: ಆರ್‌ಬಿಐ

ಪಿಟಿಐ
Published 6 ಜೂನ್ 2022, 11:08 IST
Last Updated 6 ಜೂನ್ 2022, 11:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಕರೆನ್ಸಿ ನೋಟುಗಳಲ್ಲಿ ಮಹಾತ್ಮ ಗಾಂಧೀಜಿ ಚಿತ್ರವನ್ನು ಬದಲಾಯಿಸಿ, ಬೇರೆಯವರ ಚಿತ್ರವನ್ನು ಬಳಸುವ ಯಾವುದೇ ಪ್ರಸ್ತಾವ ಇಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಸೋಮವಾರ ಸ್ಪಷ್ಟಪಡಿಸಿದೆ.

ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ವರದಿಗಳನ್ನು ಆರ್‌ಬಿಐ ಈ ಮೂಲಕ ತಳ್ಳಿಹಾಕಿದೆ.

‘ಹಾಲಿ ಇರುವ ಕರೆನ್ಸಿ ನೋಟುಗಳಲ್ಲಿ ಕೆಲವು ಬದಲಾವಣೆಗಳನ್ನು ತರುವ ಬಗ್ಗೆ ಆರ್‌ಬಿಐ ಆಲೋಚನೆ ನಡೆಸುತ್ತಿದ್ದು, ಮಹತ್ಮ ಗಾಂಧೀಜಿ ಚಿತ್ರಕ್ಕೆ ಬದಲಾಗಿ ರವೀಂದ್ರನಾಥ ಟ್ಯಾಗೋರ್ ಮತ್ತು ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಚಿತ್ರವನ್ನು ಬಳಸುವ ಬಗ್ಗೆ ಆರ್‌ಬಿಐ ಪರಿಶೀಲನೆ ನಡೆಸುತ್ತಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ, ಅಂತಹ ಯಾವ ಪ್ರಸ್ತಾವವೂ ರಿಸರ್ವ್ ಬ್ಯಾಂಕ್‌ ಮುಂದೆ ಇಲ್ಲ’ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

ADVERTISEMENT

ಕೆಲವು ನಿರ್ದಿಷ್ಟ ಮುಖಬೆಲೆಯ ನೋಟುಗಳಲ್ಲಿ ಗಾಂಧೀಜಿ ಚಿತ್ರದ ಜೊತೆಗೆ ಟ್ಯಾಗೋರ್ ಮತ್ತು ಕಲಾಂ ಅವರ ಭಾವಚಿತ್ರವನ್ನೂ ಬಳಸುವ ಬಗ್ಗೆ ಹಣಕಾಸು ಸಚಿವಾಲಯ ಮತ್ತು ಆರ್‌ಬಿಐ ಆಲೋಚನೆ ನಡೆಸುತ್ತಿವೆ ಎಂದು ಕೂಡ ವರದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.