ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಸೋಮವಾರ ಮತ್ತೆ ಹೆಚ್ಚಳವಾಗಿದೆ.
ತಿಂಗಳಲ್ಲಿ ಆದ 16ನೇ ಬಾರಿಯ ದರ ಏರಿಕೆ ಇದಾಗಿದ್ದು, ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ಗೆ ₹94.23 ಆಗಿದೆ. ಇನ್ನೊಂದೆಡೆ ಡೀಸೆಲ್ ಬೆಲೆ ₹85.15ಗೆ ಏರಿದೆ.
ಸೋಮವಾರ ಪೆಟ್ರೋಲ್ ದರಲ್ಲಿ ಲೀಟರ್ ಮೇಲೆ 29 ಪೈಸೆ ಏರಿಕೆಯಾಯಿತು. ಡಿಸೇಲ್ ದರ 56 ಪೈಸೆ ಹೆಚ್ಚಳವಾಯಿತು. ಹೀಗಾಗಿ ಮುಂಬೈನಲ್ಲಿ ಪೆಟ್ರೋಲ್ ಲೀಟರ್ಗೆ ₹100.47ಗೆ ಮಾರಾಟವಾಗುತ್ತಿದ್ದರೆ, ಡೀಸೆಲ್ ₹92.45ಗೆ ಮಾರಾಟವಾಗುತ್ತಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್ಗೆ ₹97.07, ಡೀಸೆಲ್ ₹89.99 ಆಗಿದೆ.
ಬೋಪಾಲ್ನಲ್ಲಿ ಪೆಟ್ರೋಲ್ ದರ ಲೀಟರ್ಗೆ ₹102.34 ಇದ್ದರೆ, ಡೀಸೆಲ್ ₹93.37 ಆಗಿದೆ. ಕೋಲ್ಕತ್ತದಲ್ಲಿ ಪೆಟ್ರೋಲ್ ₹94.25, ಡೀಸೆಲ್ ₹87.74 ಆಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.