ADVERTISEMENT

ಸಬ್ಸಿಡಿರಹಿತ ಎಲ್‌ಪಿಜಿ ಬೆಲೆ ₹ 1 ಹೆಚ್ಚಳ

ಪಿಟಿಐ
Published 1 ಜುಲೈ 2020, 12:32 IST
Last Updated 1 ಜುಲೈ 2020, 12:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸಬ್ಸಿಡಿರಹಿತ ಅಡುಗೆ ಅನಿಲದ (ಎಲ್‌ಪಿಜಿ) ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ ₹ 1ರಂತೆ ಹೆಚ್ಚಿಸಲಾಗಿದೆ.

ಸ್ಥಳೀಯ ಮಾರಾಟ ತೆರಿಗೆ ಇಲ್ಲವೆ ಮೌಲ್ಯವರ್ಧಿತ ತೆರಿಗೆಯ (ವ್ಯಾಟ್‌) ಕಾರಣಕ್ಕೆ ವಿವಿಧ ರಾಜ್ಯಗಳಲ್ಲಿನ ಬೆಲೆ ಹೆಚ್ಚಳವು ಪ್ರತಿ ಸಿಲಿಂಡರ್‌ಗೆ ಗರಿಷ್ಠ ₹ 4ರಷ್ಟು ಇರಲಿದೆ.

ಸತತ ಎರಡನೇ ದಿನವೂ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆ ಮಾಡಿಲ್ಲ.

ADVERTISEMENT

ವಿಮಾನ ಇಂಧನ ಬೆಲೆ: ವಿಮಾನ ಇಂಧನ ಬೆಲೆಯನ್ನು (ಎಟಿಎಫ್‌) ತಿಂಗಳ ಅವಧಿಯಲ್ಲಿ ಮೂರನೇ ಬಾರಿಗೆ ಹೆಚ್ಚಿಸಲಾಗಿದೆ. ಪ್ರತಿ ಕಿಲೊ ಲೀಟರ್‌ಗೆ ₹ 2,922.94ರಂತೆ (ಶೇ 7.48) ಹೆಚ್ಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.