
ಬೆಂಗಳೂರು: ಲಂಡನ್ ಮೂಲದ ಗ್ರಾಹಕ ತಂತ್ರಜ್ಞಾನ ಕಂಪನಿ ‘ನಥಿಂಗ್’, ಬೆಂಗಳೂರಿನ ಇಂದಿರಾ ನಗರದಲ್ಲಿ ತನ್ನ ಮೊದಲ ಮಳಿಗೆಯನ್ನು ಆರಂಭಿಸಿದೆ. ಇದು ಕಂಪನಿಯು ದೇಶದಲ್ಲಿ ಆರಂಭಿಸಿದ ಮೊದಲ ಮಳಿಗೆ ಸಹ ಆಗಿದೆ.
ಕಂಪನಿಯ ಸಿಇಒ ಕಾರ್ಲ್ ಪೆ ಮತ್ತು ಸಹ-ಸ್ಥಾಪಕ ಅಕಿಸ್ ಇವಾಂಜೆಲಿಡಿಸ್ ಅವರು ಈ ಮಳಿಗೆಯನ್ನು ಉದ್ಘಾಟಿಸಿದರು. ಮಳಿಗೆಯಲ್ಲಿ ಕಂಪನಿಯ ಅಧಿಕೃತ ಉತ್ಪನ್ನಗಳ ಜೊತೆಗೆ ಸಿಎಂಎಫ್ ಉತ್ಪನ್ನಗಳು ಒಂದೆಡೆ ದೊರೆಯಲಿದೆ ಎಂದು ಕಂಪನಿ ತಿಳಿಸಿದೆ.
‘ಭಾರತದಲ್ಲಿ ನಥಿಂಗ್‌ನ ಮೊದಲ ಮಳಿಗೆ ತೆರೆದಿರುವುದು, ಕಂಪನಿಯ ಪಾಲಿಗೆ ಮಹತ್ವದ ಮೈಲಿಗಲ್ಲು ಆಗಿದೆ. ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಲ್ಲಿ ಕಂಪನಿಯ ಸ್ಥಾನವನ್ನು ಈ ಮಳಿಗೆ ಬಲಪಡಿಸಲಿದೆ’ ಎಂದು ಕಂಪನಿಯ ಸಹ–ಸಂಸ್ಥಾಪಕ ಅಕಿಸ್ ಇವಾಂಜೆಲಿಡಿಸ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.