ADVERTISEMENT

ಐಪಿಒಗೆ ಸಿದ್ಧವಾಗುತ್ತಿರುವ ಓಲಾ

ಪಿಟಿಐ
Published 30 ಆಗಸ್ಟ್ 2021, 16:19 IST
Last Updated 30 ಆಗಸ್ಟ್ 2021, 16:19 IST
ಓಲಾ
ಓಲಾ   

ನವದೆಹಲಿ: ಓಲಾ ಕಂಪನಿಯು ತನ್ನ ಷೇರುಗಳನ್ನು ಸಾರ್ವಜನಿಕರಿಗೆ ಖರೀದಿಗೆ ಮುಕ್ತವಾಗಿಸಿ (ಐಪಿಒ) ₹ 7,324 ಕೋಟಿಯಿಂದ ₹ 10,985 ಕೋಟಿವರೆಗೆ ಬಂಡವಾಳ ಸಂಗ್ರಹಿಸುವ ಉದ್ದೇಶ ಹೊಂದಿದೆ ಎಂದು ಮೂಲಗಳು ತಿಳಿಸಿವೆ. ಐಪಿಒ ಭಾಗವಾಗಿ ಕಂಪನಿಯು ಡಿಸೆಂಬರ್ ತ್ರೈಮಾಸಿಕದಲ್ಲಿ ಅಗತ್ಯ ದಾಖಲೆಗಳನ್ನು ‘ಸೆಬಿ’ಗೆ ಸಲ್ಲಿಸಲಿದೆ ಎನ್ನಲಾಗಿದೆ.

ಐಪಿಒ ಪ್ರಕ್ರಿಯೆ ನಿಭಾಯಿಸುವ ವಿಚಾರವಾಗಿ ಓಲಾ ಕಂಪನಿಯು ಸಿಟಿಗ್ರೂಪ್ ಹಾಗೂ ಕೋಟಕ್ ಮಹೀಂದ್ರ ಬ್ಯಾಂಕ್ ಜೊತೆಗೂಡಿ ಕೆಲಸ ಆರಂಭಿಸಿದೆ ಎಂದು ಗೊತ್ತಾಗಿದೆ. ಈ ವಿಚಾರವಾಗಿ ಓಲಾ ಕಂಪನಿಯಿಂದ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಕಂಪನಿಯ ಸಹ ಸಂಸ್ಥಾಪಕ ಭವೀಶ್ ಅಗರ್ವಾಲ್ ಅವರು ಐಪಿಒ ಆಲೋಚನೆ ಇದೆ ಎಂಬುದನ್ನು ಈಚೆಗೆ ತಿಳಿಸಿದ್ದರು. ಇದು ಮುಂದಿನ ವರ್ಷ ಆಗಬಹುದು ಎಂದು ಹೇಳಿದ್ದರು. 2011ರಲ್ಲಿ ಸ್ಥಾಪನೆ ಆದ ಓಲಾ ಕಂಪನಿಯು ಭಾರತ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಬ್ರಿಟನ್‌ನಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.