ನವದೆಹಲಿ:ಜಾಗತಿಕ ತಂತ್ರಜ್ಞಾನ ಬ್ರ್ಯಾಂಡ್ ಆಗಿರುವ ಒನ್ಪ್ಲಸ್, ಭಾರತದ ಮಾರುಕಟ್ಟೆಗೆ ಕಡಿಮೆ ಬೆಲೆಯ ಸ್ಮಾರ್ಟ್ಟಿವಿಗಳನ್ನು ಬಿಡುಗಡೆ ಮಾಡಿದೆ.
ಕಡಿಮೆ ಬೆಲೆಯಲ್ಲಿಯೂ ಪ್ರೀಮಿಯಂ ಅನುಭವ ಕಟ್ಟಿಕೊಡುವ ಉದ್ದೇಶದಿಂದ ಈ ವಿಭಾಗವನ್ನು ಪ್ರವೇಶಿಸಿರುವುದಾಗಿ ಕಂಪನಿ ಹೇಳಿಕೊಂಡಿದೆ.ಒನ್ಪ್ಲಸ್ ಟಿವಿ ಯು ಮತ್ತು ವೈ ಸರಣಿಗಳನ್ನು ಬಿಡುಗಡೆ ಮಾಡಿದ್ದು, ಬೆಲೆ ₹ 12,999 ರಿಂದ ₹ 49,999ರವರೆಗೆ ಇದೆ.
ಒನ್ಪ್ಲಸ್ ಟಿವಿ ಕ್ಯು1 ಸರಣಿಯ ಮೂಲಕ ಕಂಪನಿಯು 2019ರಲ್ಲಿ ಟಿವಿ ಉದ್ಯಮವನ್ನು ಪ್ರವೇಶಿಸಿತು. ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸಂದರ್ಭದಲ್ಲಿ ಪ್ರೀಮಿಯಂ ವಿಭಾಗದಲ್ಲಿ ಈ ಟಿವಿ ಮುಂಚೂಣಿ ಸ್ಮಾರ್ಟ್ ಟಿವಿ ಎನ್ನುವ ಹೆಗ್ಗಳಿಕೆ ಪಾತ್ರವಾಯಿತು. ಇದೀಗ ಕಂಪನಿಯು ತನ್ನ ‘ನೆವರ್ ಸೆಟಲ್’ ಮನಸ್ಥಿತಿಯನ್ನು ಟಿವಿ ವಿಭಾಗಕ್ಕೂ ಅಳವಡಿಸಿಕೊಂಡಿದೆ.
* ಡೆಬಿಟ್/ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ 12 ತಿಂಗಳ ಇಎಂಐ ಶುಲ್ಕ ಇಲ್ಲ
* ಅಮೆಜಾನ್ನಲ್ಲಿ ಒನ್ಪ್ಲಸ್ ಟಿವಿ 55ಯು1 ಮತ್ತು 43ವೈ1 ಖರೀದಿಸಿದರೆ ಅಮೆಜಾನ್ ಇಕೊ ಡಾಟ್ ಉಚಿತ
ಮಾದರಿ;ಬೆಲೆ
ಒನ್ಪ್ಲಸ್ ಟಿವಿ ವೈ ಸರಣಿ 32 ಇಂಚು; ₹ 12,999
ಒನ್ಪ್ಲಸ್ ಟಿವಿ ವೈ ಸರಣಿ 43 ಇಂಚು; ₹ 22,999
ಒನ್ಪ್ಲಸ್ ಟಿವಿ ಯು ಸರಣಿ 55 ಇಂಚು; ₹ 49,999
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.