ADVERTISEMENT

ಒಎನ್‌ಜಿಸಿ ಲಾಭ ಶೇ 35ರಷ್ಟು ಇಳಿಕೆ

ಪಿಟಿಐ
Published 22 ಮೇ 2025, 13:45 IST
Last Updated 22 ಮೇ 2025, 13:45 IST
ಒಎನ್‌ಜಿಸಿ
ಒಎನ್‌ಜಿಸಿ   

ನವದೆಹಲಿ: 2024–25ರ ಆರ್ಥಿಕ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ಒಎನ್‌ಜಿಸಿ) ನಿವ್ವಳ ಲಾಭದಲ್ಲಿ ಶೇ 35ರಷ್ಟು ಇಳಿಕೆಯಾಗಿದೆ.

ಪ್ರಸಕ್ತ ಮಾರ್ಚ್‌ ತ್ರೈಮಾಸಿಕದಲ್ಲಿ ₹6,448 ಕೋಟಿ ಲಾಭ ಗಳಿಸಿದೆ. 2023–24ರ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹9,869 ಕೋಟಿ ಲಾಭ ಗಳಿಸಿತ್ತು. ಕಚ್ಚಾ ತೈಲ ಬೆಲೆಯಲ್ಲಿನ ಇಳಿಕೆಯೇ ಲಾಭ ಕಡಿಮೆಯಾಗಲು ಕಾರಣ ಎಂದು ತಿಳಿಸಿದೆ.

ವರಮಾನದಲ್ಲಿ ಶೇ 1ರಷ್ಟು ಹೆಚ್ಚಳವಾಗಿದ್ದು, ₹34,982 ಕೋಟಿ ಗಳಿಸಿದೆ. 47 ಲಕ್ಷ ಟನ್‌ ಕಚ್ಚಾ ತೈಲ ಉತ್ಪಾದನೆಯಾಗಿದೆ. 

ADVERTISEMENT

2024–25ರ ಪೂರ್ಣ ಆರ್ಥಿಕ ವರ್ಷದ ಲಾಭದಲ್ಲಿ ಶೇ 12ರಷ್ಟು ಇಳಿಕೆಯಾಗಿದ್ದು, ₹35,610 ಕೋಟಿ ಲಾಭ ಗಳಿಸಿದೆ. ವರಮಾನ ₹1.37 ಲಕ್ಷ ಕೋಟಿಯಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.