ADVERTISEMENT

ಆನ್‍ಲೈನ್ ಬ್ರ್ಯಾಂಡ್ ನಿರ್ಮಾಣ ಹೇಗೆ?

ಜಸ್ಮಿಂದರ್‌ ಸಿಂಗ್‌ ಗುಲಾಟಿ
Published 20 ನವೆಂಬರ್ 2018, 19:30 IST
Last Updated 20 ನವೆಂಬರ್ 2018, 19:30 IST
   

ಸರಕು ಮತ್ತು ಸೇವೆಗಳ ಮಾರಾಟಗಾರರು ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ತಲುಪಲು ಅನ್‌ಲೈನ್‌ ಮಾರಾಟವು ನೆರವಿಗೆ ಬರುತ್ತಿದೆ. ಪ್ರತಿಯೊಬ್ಬ ಗ್ರಾಹಕರೂ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ಅಂತರ್ಜಾಲಗಳಲ್ಲಿ ಹುಡುಕಾಡು‌ತ್ತಾರೆ. ಸಣ್ಣ ಮತ್ತು ಮಧ್ಯಮ ಪ್ರಮಾಣದ ವ್ಯವಹಾರಸ್ಥರು ತಮ್ಮ ವ್ಯವಹಾರವನ್ನು ವೃದ್ಧಿಸಿಕೊಳ್ಳಲು ಅಂತರ್ಜಾಲ ತಾಣವು ನೆರವಾಗುತ್ತಿದೆ. ದೇಶದಲ್ಲಿ 5.10 ಕೋಟಿಯಷ್ಟು ಸಣ್ಣ ಮತ್ತು ಮಧ್ಯಮ ಗಾತ್ರದ (ಎಸ್‍ಎಂಬಿ) ವಹಿವಾಟುದಾರರು ಇದ್ದಾರೆ.

ಡಿಜಿಟಲ್ ತಂತ್ರಜ್ಞಾನ ‘ಎಸ್‍ಎಂಬಿ’ಗಳ ಕಾರ್ಯಚಟುವಟಿಕೆಗಳಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತರುತ್ತಿದೆ. ಗ್ರಾಹಕರು ಹೆಚ್ಚಾಗಿ ಆನ್‍ಲೈನ್ ಮತ್ತು ಮೊಬೈಲ್ ಅಪ್ಲಿಕೇಷನ್‍ಗಳ ಮೊರೆ ಹೋಗುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ. ಇಂತಹ ಶಾಪಿಂಗ್ ಮನಸ್ಥಿತಿಯು, ‘ಎಸ್‍ಎಂಬಿ’ ವ್ಯವಹಾರಸ್ಥರಿಗೆ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲು ಪ್ರೇರಣೆ ನೀಡುತ್ತಿದೆ.

ಉತ್ಪನ್ನಗಳ ಗುಣಮಟ್ಟ, ಉಪಯೋಗ ಮತ್ತು ಒದಗಿಸುವ ಸೇವೆಗಳ ಬಗ್ಗೆ ಗ್ರಾಹಕರಿಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲು ಈ ಆನ್‍ಲೈನ್ ವ್ಯವಸ್ಥೆ ನೆರವಾಗುತ್ತಿದೆ. ಇದರ ಆಧಾರದಲ್ಲಿ ಗ್ರಾಹಕರು ಗುಣಮಟ್ಟದ ಉತ್ಪನ್ನಗಳನ್ನು ಖರೀದಿಸಲು ಸಾಧ್ಯವಾಗುತ್ತದೆ.

ADVERTISEMENT

ಆನ್‍ಲೈನ್ ಮಾರಾಟ ವ್ಯವಸ್ಥೆಯನ್ನು ಸೃಷ್ಟಿಸುವುದು ಅತ್ಯಂತ ಸುಲಭವಾದ ಮಾರ್ಗವಾಗಿದ್ದು, ಇದಕ್ಕೆ ಪೂರಕವಾಗಿ ವಿಶ್ವಾಸಾರ್ಹತೆಯ ಹೆಸರಿನ ಡೊಮೈನ್‍ ಸೃಷ್ಟಿ ಮಾಡಬೇಕು. ನಂತರ ಡಾಟ್‌ಕಾಂ ಅಥವಾ ಡಾಟ್‌ನೆಟ್ ಸೇರಿಸಿ ಅಂತರ್ಜಾಲ ಪುಟವನ್ನು ಸೃಷ್ಟಿಸಬಹುದು. ವ್ಯಾಪಾರಸ್ಥರು ಈ ಡೊಮೈನ್ ಹೆಸರನ್ನು ಸಾಮಾಜಿಕ ಜಾಲತಾಣಗಳಿಗೆ ಸಂಪರ್ಕ ಕಲ್ಪಿಸಿದರೆ ಗ್ರಾಹಕರಿಗೆ ನೇರವಾಗಿ ತಲುಪುತ್ತದೆ.

ಆನ್‍ಲೈನ್ ಅಸ್ತಿತ್ವವು ವ್ಯವಹಾರವನ್ನು ಗ್ರಾಹಕರಿಗೆ ನೇರವಾಗಿ ತಲುಪಿಸಲು ಸಹಕಾರಿಯಾಗುತ್ತದೆ. ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಗ್ರಾಹಕರನ್ನು ಗಳಿಸಿಕೊಳ್ಳಬಹುದಾಗಿದೆ. ವ್ಯವಹಾರಸ್ಥರು ತಮ್ಮ ಉತ್ಪನ್ನದ ಬ್ರ್ಯಾಂಡ್ ಜನಪ್ರಿಯಗೊಳಿಸಿ ಆನ್‍ಲೈನ್‌ನಲ್ಲಿ ತಮ್ಮ ಅಸ್ತಿತ್ವ ಸಾಬೀತುಪಡಿಸಬಹುದು. ಸರ್ಚ್ ಎಂಜಿನ್ ಆಪ್ಟಿಮೈಸೇಷನ್ (ಎಸ್‍ಇಒ) ಮಾರುಕಟ್ಟೆ ಪದ್ಧತಿ ಬಳಕೆ ಮಾಡಿಕೊಂಡಲ್ಲಿ ಗ್ರಾಹಕರನ್ನು ಸುಲಭವಾಗಿ ತಲುಪಬಹುದು. ಸಾಮಾಜಿಕ ಜಾಲತಾಣದಲ್ಲಿ ಗುರುತಿಸಿಕೊಂಡರೆ ಬ್ರ್ಯಾಂಡ್‌ಗೆ ಮೌಲ್ಯವರ್ಧನೆ ಸಿಗುತ್ತದೆ. ಅಂತರ್ಜಾಲ ತಾಣದ ವಿನ್ಯಾಸ, ಬಳಕೆದಾರರ ಜತೆಗೆ ಸಂವಹನವನ್ನು ಹೆಚ್ಚು ಆಕರ್ಷಕಗೊಳಿಸಿದರೆ ಗ್ರಾಹಕರನ್ನು ಸೆಳೆಯಬಹುದು. ಹಣ ನೀಡಿ ಅಥವಾ ಉಚಿತವಾಗಿ ವೆಬ್‍ಸೈಟ್ ರಚನೆ ಮಾಡಿಕೊಳ್ಳಲು ಸಾಕಷ್ಟು ಅವಕಾಶಗಳಿವೆ. ಇದು ಮಾರುಕಟ್ಟೆ ಕಾರ್ಯತಂತ್ರ ಉತ್ತಮಗೊಳಿಸಲು ಸಹಕಾರಿಯಾಗುತ್ತದೆ.

ಗ್ರಾಹಕ ನಿರ್ಧಾರ ಕೈಗೊಳ್ಳುವ ಈ ನಿರ್ಣಾಯಕ ಹಂತದಲ್ಲಿ ವ್ಯವಹಾರಸ್ಥರು ವೆಬ್‍ಸೈಟ್‍ಗೆ ಭೇಟಿ ನೀಡುವವರನ್ನು ಸಂಪರ್ಕಿಸುವ ಕೆಲಸವನ್ನು ಮಾಡಬೇಕು ಮತ್ತು ಅವರೊಂದಿಗೆ ಸಂವಹನ ನಡೆಸಬೇಕು. ವ್ಯವಹಾರಸ್ಥರು ಗ್ರಾಹಕರೊಂದಿಗೆ ದೀರ್ಘಾವಧಿಯ ಸಂಬಂಧ ಇಟ್ಟುಕೊಳ್ಳುವುದು ಅಗತ್ಯ. ಗ್ರಾಹಕರು ಪದೇ ಪದೇ ಬರುವಂತೆ ಮಾಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಕ್ರಿಯಾಶೀಲವಾಗಿರುವುದು, ಅಂತರ್ಜಾಲ ಸಂವಹನ, ಮಾಹಿತಿ ಹಂಚಿಕೆ ಮತ್ತು ಇಮೇಲ್ ಮೂಲಕ ಗ್ರಾಹಕರಿಗೆ ತಮ್ಮ ಉತ್ಪನ್ನಗಳು ಸೇರಿದಂತೆ ವಿವಿಧ ಮಾಹಿತಿಗಳನ್ನು ಹಂಚಿಕೊಳ್ಳುತ್ತಾ ಇರಬೇಕು. ಈ ಪ್ರಕ್ರಿಯೆಗಳನ್ನು ಮಾಡಿದರೆ ಗ್ರಾಹಕರಲ್ಲಿ ನಿಮ್ಮ ಬಗ್ಗೆ ವಿಶ್ವಾಸ ಹೆಚ್ಚಾಗುತ್ತದೆ ಮತ್ತು ಗ್ರಾಹಕರು ನಿಮ್ಮ ಕಡೆ ಹೆಚ್ಚು ಒಲವು ತೋರಿಸಲಾರಂಭಿಸುತ್ತಾರೆ.

(ಲೇಖಕ: ನೌಫ್ಲೋಟ್ಸ್‌ನ ಸಿಇಒ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.