ADVERTISEMENT

'ವಿವಾದ್ ಸೆ ವಿಶ್ವಾಸ್‌' ಮಸೂದೆ ಅಂಗೀಕಾರ

ಪಿಟಿಐ
Published 13 ಮಾರ್ಚ್ 2020, 17:07 IST
Last Updated 13 ಮಾರ್ಚ್ 2020, 17:07 IST
ನಿರ್ಮಲಾ  ಸೀತಾರಾಮನ್
ನಿರ್ಮಲಾ ಸೀತಾರಾಮನ್    

ನವದೆಹಲಿ: ನೇರ ತೆರಿಗೆ ಪಾವತಿಗೆ ಸಂಬಂಧಿಸಿದ ವಿವಾದಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶ ಒದಗಿಸುವ ‘ನೇರ ತೆರಿಗೆ ವಿವಾದ್‌ ಸೆ ವಿಶ್ವಾಸ–2020’ ಮಸೂದೆಗೆ ಸಂಸತ್ತು ಶುಕ್ರವಾರ ಅಂಗೀಕಾರ ನೀಡಿದೆ.

ತೆರಿಗೆಗೆ ಸಂಬಂಧಿಸಿದ ವಿವಾದಗಳಿಗೆ ಪರಿಹಾರ ಕಂಡುಕೊಳ್ಳಲು ಇದು ಅವಕಾಶ ಒದಗಿಸುತ್ತದೆ. ಮಸೂದೆಗೆ ಸಂಬಂಧಿಸಿದಂತೆ ಎಲ್ಲ ಭಾಷೆಗಳಲ್ಲಿ ಲಭ್ಯ ಇರುವ ಸಂಪೂರ್ಣ ವಿವರಗಳನ್ನು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಕಳಿಸಿಕೊಡಲಿದೆ.

ನೇರ ತೆರಿಗೆ ಪಾವತಿ ಕುರಿತ 4.83 ಲಕ್ಷ ಪ್ರಕರಣಗಳು ಹೈಕೋರ್ಟ್‌, ಸುಪ್ರೀಂಕೋರ್ಟ್‌, ಸಾಲ ವಸೂಲಾತಿ ನ್ಯಾಯಮಂಡಳಿ ಸೇರಿದಂತೆ ವಿವಿಧ ಮೇಲ್ಮನವಿ ಪ್ರಾಧಿಕಾರಗಳಲ್ಲಿ ವಿಚಾರಣೆ ಹಂತದಲ್ಲಿ ಇವೆ. ಈ ಪ್ರಕರಣಗಳ ಒಟ್ಟಾರೆ ಮೊತ್ತ ₹ 9.32 ಲಕ್ಷ ಕೋಟಿಗಳಷ್ಟಿದೆ.

ADVERTISEMENT

ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಇಚ್ಛಿಸುವವರು ವಿವಾದದಲ್ಲಿ ಇರುವ ಒಟ್ಟಾರೆ ತೆರಿಗೆ ಮೊತ್ತವನ್ನು ಇದೇ 31ರ ಒಳಗೆ ಪಾವತಿಸಿದರೆ ಅವರ ಪಾಲಿನ ಬಡ್ಡಿ ಮತ್ತು ದಂಡದ ಮೊತ್ತವನ್ನು ಸಂಪೂರ್ಣವಾಗಿ ಮನ್ನಾ ಮಾಡುವ ಸೌಲಭ್ಯ ಇದರಲ್ಲಿ ಇದೆ.

ಈ ಯೋಜನೆ ಜೂನ್‌ 30ರವರೆಗೆ ಜಾರಿಯಲ್ಲಿ ಇರಲಿದೆ. ತೆರಿಗೆ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳಲು ಇದು ಸುವರ್ಣಾವಕಾಶ ಕಲ್ಪಿಸಿದೆ ಎಂದು ಆದಾಯ ತೆರಿಗೆ ಇಲಾಖೆಯು ಪ್ರಚಾರ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.