ADVERTISEMENT

ಕೋವಿಡ್‌ನಿಂದಾಗಿ ಜೂನ್‌ನಲ್ಲಿ ವಾಹನಗಳ ಮಾರಾಟ ಕುಸಿತ

ಖರೀದಿಗೆ ಹಿನ್ನಡೆಯಾಗಿರುವ ಕೋವಿಡ್‌: ಎಫ್‌ಎಡಿಎ

ಪಿಟಿಐ
Published 21 ಜುಲೈ 2020, 10:06 IST
Last Updated 21 ಜುಲೈ 2020, 10:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೊರೊನಾ ಸೋಂಕು ವ್ಯಾಪಿಸುತ್ತಿರುವುದರಿಂದ ಜನರು ವಾಹನಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಜೂನ್‌ನಲ್ಲಿ ಪ್ರಯಾಣಿಕ ವಾಹನದ ರಿಟೇಲ್‌ ಮಾರಾಟ ಶೇ 38ರಷ್ಟು ಇಳಿಕೆಯಾಗಿದೆ ಎಂದು ವಾಹನ ವಿತರಕರ ಒಕ್ಕೂಟ (ಎಫ್‌ಎಡಿಎ) ಹೇಳಿದೆ.

‘ದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಬಿತ್ತನೆ ಪ್ರದೇಶದಲ್ಲಿ ಏರಿಕೆ ಕಂಡುಬಂದಿದೆ. ಹೀಗಾಗಿ ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗದಲ್ಲಿ ವಾಹನಗಳ ಖರೀದಿಯು ನಿಧಾನವಾಗಿ ಚೇತರಿಸಿಕೊಳ್ಳಲು ಆರಂಭವಾಗಿದೆ. ಟ್ರ್ಯಾಕ್ಟರ್‌ ಮಾರಾಟ ಹೆಚ್ಚಾಗುತ್ತಿದ್ದು, ಡೀಲರ್‌ ಬಳಿ ಉಳಿದಿದ್ದ ದ್ವಿಚಕ್ರ ಮತ್ತು ಸಣ್ಣ ವಾಣಿಜ್ಯ ವಾಹನಗಳ ನಿಧಾನವಾಗಿ ಮಾರಾಟವಾಗತೊಡಗಿವೆ’ ಎಂದು ಒಕ್ಕೂಟದ ಅಧ್ಯಕ್ಷ ಆಶಿಷ್‌ ಹರ್ಷರಾಜ್‌ ಕಾಳೆ ತಿಳಿಸಿದ್ದಾರೆ.

ವಾಣಿಜ್ಯ ವಾಹನ ವಿಭಾಗದ ಚೇತರಿಕೆಗೆ ಶೀಘ್ರವೇ ಹಳೆ ವಾಹನಗಳ ಗುಜರಿ ನೀತಿಯನ್ನು ಜಾರಿಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ADVERTISEMENT

‘ದೇಶದಲ್ಲಿ ಇನ್ನಮುಂದೆ ಲಾಕ್‌ಡೌನ್‌ ಇರುವುದಿಲ್ಲ ಎಂದು ಊಹಿಸಿಕೊಂಡರೆ ಹಾಗೂ ಇನ್ನಷ್ಟು ಅನ್‌ಲಾಕ್‌ ಕ್ರಮಗಳು ಜಾರಿಗೊಂಡರೆ ಅದರಿಂದಾಗಿ ಜುಲೈನಲ್ಲಿ ವಾಹನಗಳ ನೋಂದಣಿಯು ಜುಲೈಗಿಂತಲೂ ಹೆಚ್ಚಾಗಲಿದೆ.

‘ಪೂರೈಕೆ ವ್ಯವಸ್ಥೆಗೆ ಅಡ್ಡಿಯಾಗಿರುವುದು ಹಾಗೂ ಎನ್‌ಬಿಎಫ್‌ಸಿಗಳಿಂದ ರಿಟೇಲ್‌ ಸಾಲವು ಸಮರ್ಪಕವಾಗಿ ಸಿಗದೇ ಇರುವುದರಿಂದ, ಹಬ್ಬದ ಅವಧಿಯು ಆರಂಭವಾಗುವವರೆಗೂ ವಾಹನಗಳ ಬೇಡಿಕೆ ಸಹಜ ಸ್ಥಿತಿಗೆ ಮರಳುವುದು ಕಷ್ಟ’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಮಾರಾಟ ಇಳಿಕೆ (%)

ಪ್ರಯಾಣಿಕ ವಾಹನ–38

ದ್ವಿಚಕ್ರ–41

ತ್ರಿಚಕ್ರ–75

ವಾಣಿಜ್ಯ ವಾಹನ–84

ಒಟ್ಟಾರೆ ಮಾರಾಟ–42

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.